ಹಿಮ್ಮುಖ ಓಟದಿಂದ ಎಷ್ಟೊಂದು ಲಾಭ

7

ಹಿಮ್ಮುಖ ಓಟದಿಂದ ಎಷ್ಟೊಂದು ಲಾಭ

Published:
Updated:
ಹಿಮ್ಮುಖ ಓಟದಿಂದ ಎಷ್ಟೊಂದು ಲಾಭ

ಉತ್ತಮ ಆರೋಗ್ಯ, ಸದೃಢ ದೇಹ, ತೆಳು ಮೈಮಾಟ ಹೊಂದಬೇಕು ಎನ್ನುವುದು ಎಲ್ಲರ ಬಯಕೆ. ಹೀಗಾಗಿಯೇ ಬೆಳಿಗ್ಗೆ ಎದ್ದು ಜಾಗಿಂಗ್‌, ವಾಕಿಂಗ್‌, ಯೋಗ, ವ್ಯಾಯಾಮಗಳ ಮೊರೆ ಹೋಗುತ್ತಿರುವವರು ಹೆಚ್ಚಾಗುತ್ತಿದ್ದಾರೆ. ನಿಮ್ಮ ಪ್ರಯತ್ನಕ್ಕೆ ಬೇಗ ಫಲಿತಾಂಶ ಬೇಕು ಎಂದರೆ ಹಿಮ್ಮುಖವಾಗಿ ನಡೆಯಲು ಅಥವಾ ಓಡಲು (ಬ್ಯಾಕ್‌ವರ್ಡ್‌ ರನ್ನಿಂಗ್‌) ಆರಂಭಿಸಿ. ಹೌದು, ಈ ನಡೆಯ ಉಪಯೋಗ ಅರಿತರೆ ಇಂದೇ ಹಿಮ್ಮುಖವಾಗಿ ಚಲಿಸಲು ಶುರುವಿಟ್ಟುಕೊಳ್ಳುತ್ತೀರಿ.

ಫಿಟ್‌ನೆಸ್‌ ಜಗತ್ತಿನಲ್ಲಿ ಇದು ಹೊಸ ಪರಿಕಲ್ಪನೆಯೇನಲ್ಲ. ನೂರಾರು ವರ್ಷಗಳಿಂದ ಜಪಾನ್‌ ಹಾಗೂ ಯುರೋಪ್‌ನಲ್ಲಿ ಹಿಮ್ಮುಖ ಓಟವನ್ನು ಅಭ್ಯಾಸ ಮಾಡಲಾಗುತ್ತಿದೆ. ಈ ಓಟಕ್ಕೆ ರೆಟ್ರೊ ರನ್ನಿಂಗ್‌ ಎಂದೂ ಕರೆಯಲಾಗುತ್ತದೆ.

* ನೋವು, ಗಾಯಗಳಿದ್ದಾಗಲೂ ಮಾಡಬಹುದು: ಪೆಟ್ಟಾದಾಗ ವ್ಯಾಯಾಮ ಅಭ್ಯಾಸ ಸಾಧ್ಯವಿಲ್ಲ. ನೋವಾದಾಗಲೂ ಅಷ್ಟೇ ವ್ಯಾಯಾಮವನ್ನು ನಿಲ್ಲಿಸಬೇಕಾಗುತ್ತದೆ. ಆದರೆ ಹಿಮ್ಮುಖ ನಡಿಗೆ ಹಾಗೂ ಓಟ ಇಂಥ ಸಂದರ್ಭಗಳಲ್ಲಿಯೂ ಮಾಡಬಹುದು ಎನ್ನುವುದು ವಿಶೇಷ. ತೊಡೆಸಂದು, ಮಂಡಿ, ಮೊಣಕಾಲು ಸಮಸ್ಯೆ, ಸ್ನಾಯು ನೋವಿನಂಥ ಸಮಸ್ಯೆಗಳಿದ್ದಾಗಲೂ ಇದನ್ನು ಅಭ್ಯಾಸ ಮಾಡಬಹುದು.

* ಸಮತೋಲನ ಹೆಚ್ಚುತ್ತದೆ: ಹಿಮ್ಮುಖವಾಗಿ ನಡೆಯುವುದರಿಂದ ಹಾಗೂ ಓಡುವುದರಿಂದ ಸ್ನಾಯುಗಳು ಬಲಶಾಲಿಯಾಗುವುತ್ತವೆ. ಮೊಣಕಾಲುಗಳ ಶಕ್ತಿ ವೃದ್ಧಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ.

* ಹೆಚ್ಚು ಕ್ಯಾಲರಿ ವ್ಯಯಿಸುತ್ತೀರಿ: ಮುಮ್ಮುಖವಾಗಿ 1000 ಹೆಜ್ಜೆ ನಡೆಯುವುದು ಹಿಮ್ಮುಖವಾಗಿ 100ಹೆಜ್ಜೆ ನಡೆಯುವುದಕ್ಕೆ ಸಮ. ‍ಹಿಮ್ಮುಖವಾಗಿ ನಡೆಯುವುದರಿಂದ ಬಹುಬೇಗನೆ ಕ್ಯಾಲರಿ ಕರಗುತ್ತದೆ. ಇದರಿಂದ ಬಹುಬೇಗನೆ ತೂಕ ಕಡಿಮೆ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry