ನಿಧನ: ಪಾದೇಕಲ್ಲು ನರಸಿಂಹ ಭಟ್

7

ನಿಧನ: ಪಾದೇಕಲ್ಲು ನರಸಿಂಹ ಭಟ್

Published:
Updated:
ನಿಧನ: ಪಾದೇಕಲ್ಲು ನರಸಿಂಹ ಭಟ್

ಮಂಗಳೂರು: ಮೂರು ಭಾಷೆಗಳಲ್ಲಿ ವಿದ್ವಾಂಸ, ಲೇಖಕರಾಗಿದ್ದ ಪಾದೇಕಲ್ಲು ನರಸಿಂಹ ಭಟ್‌ (83) ಸೋಮವಾರ ಸ್ವಗೃಹದಲ್ಲಿ ನಿಧನರಾದರು.

ಕನ್ನಡ, ಇಂಗ್ಲಿಷ್‌ ಹಾಗೂ ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಕೃಷಿಕರು. ‘ಕಾವ್ಯ ಮೀಮಾಂಸೆ ಹೊಳಹುಗಳು’ (ಮಂಗಳೂರು ವಿಶ್ವ ವಿದ್ಯಾಲಯ), ‘ಅಭಿನವಗುಪ್ತ’ (ಅಕ್ಷರ ಪ್ರಕಾಶನ) ಎರಡು ಕೃತಿಗಳು ಪ್ರಕಟವಾಗಿವೆ. ನವ್ಯ ಕವಿ ಅಡಿಗರ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟಿತ ಲೇಖನಗಳಿಂದ ಇವರು ಜನಪ್ರಿಯರಾಗಿದ್ದರು.

ಮೃತರಿಗೆ ಪತ್ನಿ, ಒಬ್ಬರು ಪುತ್ರ ಇದ್ದಾರೆ. ಅಂತ್ಯಕ್ರಿಯೆ ರಾತ್ರಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry