ಚಿತ್ರೋತ್ಸವ ಮತ್ತು ನೆರವು

7

ಚಿತ್ರೋತ್ಸವ ಮತ್ತು ನೆರವು

Published:
Updated:

ಚಲನಚಿತ್ರೋತ್ಸವ ವಿಷಯದಲ್ಲಿ ಮೈಸೂರಿಗೆ ‘ವಂಚನೆ’ ಆಗಿದೆ ಎಂಬ ಫಣಿರಾಜರ ಲೇಖನಕ್ಕೆ (ಪ್ರ.ವಾ., ಜ. 17) ಪ್ರತಿಕ್ರಿಯೆ. ದಿನಕ್ಕೆ 600 ಜನ ಭಾಗವಹಿಸುವ ಉತ್ಸವಕ್ಕೆ ಸರ್ಕಾರ ನೀಡುವ ಹಣ ಸರಿಯಾಗಿ ಉಪಯೋಗವಾಗುತ್ತದೆಯೇ?

‘ಬಿಫೆಸ್‌’ನ ಆರ್ಟಿಸ್ಟಿಕ್ ಡೈರೆಕ್ಟರ್ ಮೊದಲಿನಿಂದಲೂ ‘ಮೈಸೂರಿನಲ್ಲಿ ಚಿತ್ರೋತ್ಸವ ಮಾಡಿ, ಆದರೆ ಪ್ರತ್ಯೇಕವಾಗಿ’ ಎಂದು ಹೇಳುತ್ತಿದ್ದಾರೆ. ಆದರೆ ಮೈಸೂರಿನವರಾದ ಮುಖ್ಯಮಂತ್ರಿ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಕೇಳುತ್ತಿರಲಿಲ್ಲ.

ನಾನು ಒಂದು ದಶಕದಿಂದ ಗೋವಾ ಚಿತ್ರೋತ್ಸವಕ್ಕೆ ಹೋಗುತ್ತಿದ್ದೇನೆ. ಮಡಗಾಂವ್ ಅಥವಾ ಪಣಜಿಯಿಂದ ದೂರದಲ್ಲಿರುವ ಸ್ಟೇಡಿಯಂ ಒಂದರಲ್ಲಿ ಸಮಾರಂಭ ಮಾಡುತ್ತಿರುವುದರಿಂದ ಪ್ರತಿನಿಧಿಗಳಿಗೆ ತೊಂದರೆ ಆಗುತ್ತಿದೆ ಅಷ್ಟೇ.

ಬೆಂಗಳೂರಿಗೆ ಗ್ಲೋಬಲ್ ಬ್ರ್ಯಾಂಡ್ ಹಚ್ಚಿದ್ದಾರೆ. ಮೈಸೂರು ಸಾಂಸ್ಕೃತಿಕ ಮಹತ್ವವುಳ್ಳದ್ದು, ತನ್ನತನ ಉಳಿಸಿಕೊಳ್ಳಬೇಕು. ಮುಂಬೈನಲ್ಲಿ ಹಲವು ಚಿತ್ರೋತ್ಸವಗಳಾದರೂ ಪುಣೆಯಲ್ಲೂ ಒಂದು ಚಿತ್ರೋತ್ಸವ ನಡೆಯುತ್ತಿದೆ. ಈಚೆಗೆ ಸರ್ಕಾರದ ಕಾರ್ಯಕ್ರಮದಲ್ಲಿ ತಮ್ಮ ಅಜೆಂಡಾ ಅಳವಡಿಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ತಾವು ಸಂಘಟಿಸಿ, ಸರ್ಕಾರದ ನೆರವು ಕೇಳುವುದು ಉತ್ತಮ.

– ಎಚ್.ಎಸ್. ಮಂಜುನಾಥ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry