ಸ್ಥಿರ ದೂರವಾಣಿಗೆ ಕರಭಾರ

7

ಸ್ಥಿರ ದೂರವಾಣಿಗೆ ಕರಭಾರ

Published:
Updated:

ಸ್ಥಿರ ದೂರವಾಣಿಗೆ ಪ್ರತೀ ತಿಂಗಳು ಗ್ರಾಹಕರು ಶೇ 18ರಷ್ಟು ಜಿಎಸ್‌ಟಿ ಕಕ್ಕಬೇಕಾಗಿದೆ. ಮೂಗಿಗೆ ಮೂಗುತಿ ಭಾರ ಎನಿಸಿದೆ. ಸ್ಥಿರ ದೂರವಾಣಿಗೆ ಉತ್ತೇಜನ ಕೊಡುವಲ್ಲಿ ಕೇಂದ್ರ ಸರಕಾರ ಹಿಂದೆ ಬಿದ್ದಿದೆ. ಉಚಿತ ಕರಗಳ ಅವಧಿ ಎರಡು ಗಂಟೆ ಕಡಿಮೆ ಮಾಡಿರುವುದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಕೊಟ್ಟಂತಾಗಿದೆ. ಬಿ.ಎಸ್‌.ಎನ್‌.ಎಲ್‌.  ಸಮಾಜಮುಖಿಯಾಗಲಿ ಎಂದು ಹಾರೈಸೋಣವೇ?

– ರಾಜಶೇಖರ ಹಾದಿಮನಿ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry