ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ರಾಜ್ಯದ ಕನಸು...

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಸುತ್ತೂರು ಕ್ಷೇತ್ರದಲ್ಲಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಭಾಗವಹಿಸಿದ್ದ ರಂಭಾಪುರಿ ಮಠದ ಪ್ರಸನ್ನ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿರುವ ಮಾತು ‘ಬಸವಣ್ಣನ ಗುತ್ತಿಗೆ ಹಿಡಿದವರಂತೆ ವರ್ತನೆ’ ಶೀರ್ಷಿಕೆಯಡಿ ಪ್ರಕಟವಾಗಿದೆ (ಪ್ರ.ವಾ., ಜ.19). ಗುತ್ತಿಗೆ ಹಿಡಿಯುವುದು ವ್ಯವಹಾರ, ಲಾಭ ಮಾಡಿಕೊಳ್ಳುವುದಕ್ಕೆ. ಶರಣ ಧರ್ಮವು ಗುತ್ತಿಗೆಯ ಧರ್ಮವಲ್ಲ. ಈ ದೇಶದಲ್ಲಿ ಅನೇಕ ಪಟ್ಟಭದ್ರರು ದೇವರು, ಧರ್ಮ, ಭಕ್ತಿ, ಪೂಜೆಯನ್ನು ತಮ್ಮ ಅವಿಚಾರಗಳಿಂದ ಗುತ್ತಿಗೆ ಹಿಡಿಯುತ್ತಲೇ ಬಂದಿದ್ದಾರೆ.

ಬಸವಣ್ಣನವರು ತಮ್ಮ ಸಹಜ ಮಾನವೀಯ, ವೈಚಾರಿಕ, ವಿಶ್ವಕುಟುಂಬತ್ವದ ನೆಲೆಯಲ್ಲಿ ತಮ್ಮ ಚಿಂತನೆಗಳನ್ನು ಜನರ ಮುಂದಿಟ್ಟಿದ್ದಾರೆ. ಈ ಕಾರಣಗಳಿಂದ ಲಿಂಗವಂತ (ಲಿಂಗಾಯತ) ಧರ್ಮ ವಿಶ್ವಧರ್ಮವಾಗಲು ಸಾಧ್ಯವಾಗಿದೆ. ಈ ಧರ್ಮಕ್ಕೆ ಸರಿಸುಮಾರು 900 ವರ್ಷಗಳ ಸ್ಪಷ್ಟ ಇತಿಹಾಸವಿದೆ. ಹಾಗೆ ನೋಡಿದರೆ ಗುತ್ತಿಗೆ ಹಿಡಿದಿದ್ದಾರೆ ಎನ್ನುವ ಆಲೋಚನೆಯೇ ಸರಿಯಾದದ್ದಲ್ಲ. ಬಸವಾದಿ ಶರಣರ ತತ್ತ್ವಗಳನ್ನು ಬಸವಣ್ಣನವರ ಅನುಯಾಯಿಗಳು ಸಹಜವಾಸ್ತವ, ನಿಜ ಮಾನವೀಯ ನೆಲೆಯಲ್ಲಿ  ಗುತ್ತಿಗೆ ಹಿಡಿದರೆ ತಪ್ಪೇನಿದೆ, ಇದು ಧರ್ಮದ ಒಡೆಯುವಿಕೆಗೆ ಹೇಗೆ ಕಾರಣವಾಗುತ್ತದೆ?

ಸತ್ಯ ಯಾವತ್ತೂ ಕಹಿ. ತಮ್ಮ ಪ್ರಖರ ವೈಚಾರಿಕ ನಿಲುವಿನಿಂದ ಸರ್ವೋದಯ ಬಯಸುತ್ತಾ ಬಂದಿರುವ ಶರಣ ಧರ್ಮವನ್ನು ಯಾರೂ ಗುತ್ತಿಗೆ ಹಿಡಿಯಲು ಸಾಧ್ಯವಿಲ್ಲ. ಇಲ್ಲಿ ನಮಗೆ ಬೇಕಾಗಿರುವುದು ವಿನಯ ಮತ್ತು ವಿವೇಕ. ಇವು ನಮ್ಮಲ್ಲಿ ಜಾಗೃತವಾದಾಗ ಬಸವಧರ್ಮ ಸಲೀಸು. ಅಂಥ ತೀರ್ಮಾನಕ್ಕೆ ಎಲ್ಲರೂ ಬರೋಣ. ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸೋಣ.

– ಶಂಕರಪ್ರಿಯ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT