ಸಂತೋಷ್ ಟ್ರೋಫಿ ಫುಟ್‌ಬಾಲ್‌: ಕೇರಳ ರಾಜ್ಯ ತಂಡ ಫೈನಲ್‌ಗೆ

7

ಸಂತೋಷ್ ಟ್ರೋಫಿ ಫುಟ್‌ಬಾಲ್‌: ಕೇರಳ ರಾಜ್ಯ ತಂಡ ಫೈನಲ್‌ಗೆ

Published:
Updated:
ಸಂತೋಷ್ ಟ್ರೋಫಿ ಫುಟ್‌ಬಾಲ್‌: ಕೇರಳ ರಾಜ್ಯ ತಂಡ ಫೈನಲ್‌ಗೆ

ಬೆಂಗಳೂರು: ಕೇರಳ ರಾಜ್ಯ ತಂಡ ಸಂತೋಷ್ ಟ್ರೋಫಿ ಫುಟ್‌ಬಾಲ್ ದಕ್ಷಿಣ ವಲಯ ಅರ್ಹತಾ ಟೂರ್ನಿಯ ಫೈನಲ್ ಪ್ರವೇಶಿಸಿತು.

ಸೋಮವಾರ ಇಲ್ಲಿ ನಡೆದ ತಮಿಳುನಾಡು ವಿರುದ್ಧದ ‘ಬಿ’ ಗುಂಪಿನ ಪಂದ್ಯದಲ್ಲಿ ತಂಡ ಡ್ರಾ ಸಾಧಿಸಿತು. ಆದರೂ ಗೋಲುಗಳಿಕೆಯ ಆಧಾರದಲ್ಲಿ ತಂಡ ಪ್ರಶಸ್ತಿ ಸುತ್ತು ಪ್ರವೇಶಿಸಿತು.

ಉಭಯ ತಂಡಗಳಿಗೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿತ್ತು. ಮೊದಲಾರ್ಧದಲ್ಲಿ ಎರಡೂ ತಂಡದವರು ಪ್ರಬಲ ಪೈಪೋಟಿ ನಡೆಸಿದರು. ಆದರೆ ಗೋಲುಗಳು ಮೂಡಿಬರಲಿಲ್ಲ. ದ್ವಿತೀಯಾರ್ಧದಲ್ಲೂ ಗೋಲು ಗಳಿಸಲು ಪ್ರಯತ್ನಿಸಿದ ಆಟಗಾರರು ವಿಫಲರಾದರು.

ಟೂರ್ನಿಯ ಉತ್ತಮ ಆಟಗಾರ ಪ್ರಶಸ್ತಿ ಕರ್ನಾಟಕ ತಂಡದ ಫಾರ್ವರ್ಡ್ ಆಟಗಾರ ಎಸ್‌.ರಾಜೇಶ್ ಅವರ ಪಾಲಾಯಿತು.

ಭಾನುವಾರ ನಡೆದ ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ಅವರು ಎರಡು ಗೋಲು ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry