ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಜತೆ ಮೈತ್ರಿ ಇಲ್ಲ: ಸಿಪಿಎಂ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೆ ಇರಲು ಸಿಪಿಎಂ ನಿರ್ಧರಿಸಿದೆ. ಭಾನುವಾರ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವಿತ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಲಾಗಿದೆ.

ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನೇತೃತ್ವದ ಬಣ ಈ ಮಸೂದೆ ರೂಪಿಸಿತ್ತು. ಆದರೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲಿಯೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದನ್ನು ಪ್ರಕಾಶ್ ಕಾರಟ್ ನೇತೃತ್ವದ ಬಣ ವಿರೋಧಿಸಿತ್ತು.

ಮಸೂದೆಗೆ ವಿರುದ್ಧವಾಗಿ 55 ಹಾಗೂ ಪರವಾಗಿ 31 ಮತಗಳು ಚಲಾವಣೆಯಾದವು.

‘ಮತದಾನದ ನಂತರ ಕೆಲವು ತಿದ್ದುಪಡಿಗಳನ್ನು ಸೇರಿಸಿ ಈ ಪ್ರಸ್ತಾವಿತ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದರ ಪ್ರಕಾರ ಕಾಂಗ್ರೆಸ್ ಜತೆಗೆ ಯಾವುದೇ ಚುನಾವಣಾ ಮೈತ್ರಿ ಇಲ್ಲ’ ಎಂದು ಯೆಚೂರಿ ಹೇಳಿದ್ದಾರೆ.

ತಮ್ಮ ರಾಜಕೀಯ ನಿಲುವಿಗೆ ಈ ಮತದಾನದಲ್ಲಿ ಸೋಲಾದರೆ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸುವುದಾಗಿ ಮತದಾನಕ್ಕೂ ಮೊದಲು ಯೆಚೂರಿ ಹೇಳಿದ್ದರು ಎಂದು ಸಿಪಿಎಂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT