ಕಾಡುಹಂದಿ ಬೇಟೆಗೆ ಹೋಗಿ ಪ್ರಾಣ ತೆತ್ತ ವ್ಯಕ್ತಿ

7

ಕಾಡುಹಂದಿ ಬೇಟೆಗೆ ಹೋಗಿ ಪ್ರಾಣ ತೆತ್ತ ವ್ಯಕ್ತಿ

Published:
Updated:

ಮೈಸೂರು: ಕಾಡುಹಂದಿ ಬೇಟೆಯಾಡಲು ಸ್ನೇಹಿತರೊಂದಿಗೆ ಹೋಗಿದ್ದ ವ್ಯಕ್ತಿಗೆ ಗುಂಡು ತಗುಲಿ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಕೋಡ ಅರಳಿಮರ ಸಮೀಪ ಕಣಿಯನಹುಂಡಿ ಶಿವಣ್ಣೇಗೌಡ  (48) ಮೃತಪಟ್ಟಿದ್ದಾರೆ. ಐವರು ಸ್ನೇಹಿತರೊಂದಿಗೆ ಬೇಟೆಗೆ ಹೋಗಿದ್ದರು. ಕಾಡು ಹಂದಿಗೆ ಗುಂಡು ಹೊಡೆಯುವಾಗ ಆಯ‍ತಪ್ಪಿ ಶಿವಣ್ಣೇಗೌಡಗೆ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಎಚ್‌.ಡಿ.ಕೋಟೆ ಪೊಲೀಸ್‌ ಠಾಣೆಯಲ್ಲಿ ಮೃತರ ಪುತ್ರ ಕುಮಾರ ದೂರು ನೀಡಿದ್ದು, ಪೊಲೀಸರು ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry