ಏಪ್ರಿಲ್ 7ರಂದು ಐಪಿಎಲ್‌ ಟೂರ್ನಿ ಆರಂಭ

7

ಏಪ್ರಿಲ್ 7ರಂದು ಐಪಿಎಲ್‌ ಟೂರ್ನಿ ಆರಂಭ

Published:
Updated:
ಏಪ್ರಿಲ್ 7ರಂದು ಐಪಿಎಲ್‌ ಟೂರ್ನಿ ಆರಂಭ

ನವದೆಹಲಿ: ಇಂಡಿಯನ್‌ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 11ನೇ ಆವೃತ್ತಿ ಏಪ್ರಿಲ್ ಏಳರಿಂದ ಮೇ 27ರ ವರೆಗೆ ನಡೆಯಲಿದೆ. ಮುಂಬೈನಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯ ಹಾಗೂ ಫೈನಲ್‌ ನಡೆಯಲಿದೆ ಎಂದು ಐಪಿಎಲ್‌ ಆಡಳಿತ ಸಮಿತಿ ಸೋಮವಾರ ತಿಳಿಸಿದೆ.

ಈ ಬಾರಿ ಪಂದ್ಯಗಳ ಸಮಯವನ್ನು ಬದಲಿಸುವುದಕ್ಕೂ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಹಿಂದೆ ಸಂಜೆ ನಾಲ್ಕು ಗಂಟೆ ಮತ್ತು ರಾತ್ರಿ ಎಂಟು ಗಂಟೆಗೆ ಪಂದ್ಯಗಳು ನಡೆಯುತ್ತಿದ್ದವು. ಪಂದ್ಯಗಳ ಪ್ರಸಾರ ಮಾಡುವ ಸಂಸ್ಥೆಗಳ ಒತ್ತಾಯದ ಮೇರೆಗೆ ಈ ಬದಲಾವಣೆಗೆ ಸಮಿತಿ ಮುಂದಾಗಿದೆ.

ನಾಲ್ಕು ಗಂಟೆಯ ಪಂದ್ಯವನ್ನು ಸಂಜೆ 5.30ಕ್ಕೆ ಮತ್ತು ಎಂಟು ಗಂಟೆಯ ಪಂದ್ಯವನ್ನು ರಾತ್ರಿ ಏಳು ಗಂಟೆಗೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದರು.

*ಕ್ರಿಕೆಟಿಗನಾಗಲು ಸಿಎಸ್‌ಕೆ ಕಾರಣ: ಸುರೇಶ್‌ ರೈನಾ

‘ನನ್ನನ್ನು ನಿಜವಾದ ಕ್ರಿಕೆಟಿ ಗನನ್ನಾಗಿಸಿದ ಶ್ರೇಯಸ್ಸು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಲ್ಲುತ್ತದೆ ಎಂದು ಆಲ್‌ರೌಂಡರ್ ಸುರೇಶ್ ರೈನಾ ಅಭಿಪ್ರಾಯಪಟ್ಟರು. ಕೋಲ್ಕತ್ತದಲ್ಲಿ ಸೋಮವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಉತ್ತರ ಪ್ರದೇಶ ಪರ ಔಟಾಗದೆ 126 ರನ್‌ ಗಳಿಸಿದ ನಂತರ ಮಾತನಾಡಿದ ಅವರು ‘ಐಪಿಎಲ್‌ನಲ್ಲಿ ಸಿ.ಎಸ್‌.ಕೆಗಾಗಿ ಅನೇಕ ಪಂದ್ಯಗಳನ್ನು ಆಡಿದ್ದೇನೆ. ಮತ್ತೊಮ್ಮೆ ಈ ತಂಡಕ್ಕಾಗಿ ಆಡಲು ಸಾಧ್ಯವಾಗುತ್ತಿರುವುದು ಖುಷಿಯ ವಿಷಯ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry