ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ದಾಳಿಗೆ ತಕ್ಕ ಉತ್ತರ ನೀಡುತ್ತೇವೆ: ಪಾಕ್‌ ಸೇನಾ ಮುಖ್ಯಸ್ಥ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭಾರತದಿಂದ ನಡೆಯುವ ಯಾವುದೇ ಆಕ್ರಮಣ ಮತ್ತು ತಪ್ಪು ದಾರಿಗೆಳೆಯುವ ಕ್ರಮಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ ಎಚ್ಚರಿಸಿದ್ದಾರೆ.

ಖುರೆಟ್ಟಾ ಮತ್ತು ರಟ್ಟಾ ಆರ್ಯನ್‌ ವಲಯಗಳಲ್ಲಿನ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ)  ಭೇಟಿ ನೀಡಿದ ವೇಳೆ ಬಜ್ವಾ ಮಾತನಾಡಿರುವುದಾಗಿ ಇಂಟರ್‌ ಸರ್ವಿಸಸ್‌ ಪಬ್ಲಿಕ್‌ ರಿಲೇಷನ್‌ ತಿಳಿಸಿದೆ.

ಸ್ಥಳೀಯ ಕಮಾಂಡರ್‌ಗಳನ್ನು ಭೇಟಿ ಮಾಡಿದ ಬಜ್ವಾ ಅವರಿಗೆ ಕದನ ವಿರಾಮ ಉಲ್ಲಂಘನೆ ವಿಶೇಷವಾಗಿ  ಎಲ್‌ಒಸಿಯುದ್ದಕ್ಕೂ ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ದಾಳಿಯ ಬಗ್ಗೆ ವಿವರಿಸಲಾಯಿತು.

‘2003 ರ ಕದನ ವಿರಾಮ ಉಲ್ಲಂಘನೆ ನಿಯಮ ಪಾಲಿಸಲು ನಾವು ಬದ್ಧವಾಗಿದ್ದೇವೆ ’ ಎಂದು ಅವರು ಹೇಳಿದರು.

ರಕ್ಷಣಾತ್ಮಕ ಕ್ರಮಗಳನ್ನು ಹೆಚ್ಚಿಸುವಂತೆಯೂ ಅವರು ಈ ಸಂದರ್ಭದಲ್ಲಿ ಸೂಚಿಸಿದರು. ನಂತರ ಸಿಯಾಲ್‌ಕೋಟ್‌ನಲ್ಲಿ ಆಸ್ಪತ್ರೆಗೆ ತೆರಳಿ ಭಾರತದ ಯೋಧರ ದಾಳಿಯಿಂದ ಗಾಯಗೊಂಡಿದ್ದರೆನ್ನಲಾದ ಗಾಯಾಳುಗಳನ್ನು ಭೇಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT