ಪನಾಮ ಪೇಪರ್ಸ್ ಹಗರಣ ಷರೀಫ್ ವಿರುದ್ಧ ಪೂರಕ ಪ್ರಕರಣ

7

ಪನಾಮ ಪೇಪರ್ಸ್ ಹಗರಣ ಷರೀಫ್ ವಿರುದ್ಧ ಪೂರಕ ಪ್ರಕರಣ

Published:
Updated:
ಪನಾಮ ಪೇಪರ್ಸ್ ಹಗರಣ ಷರೀಫ್ ವಿರುದ್ಧ ಪೂರಕ ಪ್ರಕರಣ

ಇಸ್ಲಾಮಾಬಾದ್‌: ಪನಾಮ ಪೇಪರ್ಸ್‌ ಹಗರಣ ತನಿಖೆ ಸಂಬಂಧ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರ ನಿಗ್ರಹ ವೇದಿಕೆ ಪೂರಕ ಪ್ರಕರಣವೊಂದನ್ನು ದಾಖಲಿಸಿದೆ. ಇದರಿಂದ ನವಾಜ್‌ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ನ್ಯಾಷನಲ್ ಅಕೌಂಟೆಬಿಲಿಟಿ ಬ್ಯುರೊ (ಎನ್ಎಬಿ) ಇಸ್ಲಾಮಾಬಾದ್‌ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ದೂರು ದಾಖಲಿಸಿದೆ. ಷರೀಫ್‌ ಅವರಲ್ಲದೆ ಇಬ್ಬರು ಪುತ್ರರಾದ ಹುಸೇನ್‌ ಮತ್ತು ಹಸನ್‌, ಮಗಳು ಮರಿಯಂ ಹಾಗೂ ಅಳಿಯ ಸಫ್ದಾರ್‌ ವಿರುದ್ಧ ಈಗಾಗಲೇ ಮೂರು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಎನ್ಎಬಿ ಪತ್ತೆಹಚ್ಚಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹೊಸ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry