ಕ್ರಿಕೆಟ್‌: ಪಾಕ್ ತಂಡಕ್ಕೆ ಸೋಲು

7

ಕ್ರಿಕೆಟ್‌: ಪಾಕ್ ತಂಡಕ್ಕೆ ಸೋಲು

Published:
Updated:
ಕ್ರಿಕೆಟ್‌: ಪಾಕ್ ತಂಡಕ್ಕೆ ಸೋಲು

ವೆಲಿಂಗ್ಟನ್‌, ನ್ಯೂಜಿಲೆಂಡ್‌: ಏಕದಿನ ಸರಣಿಯನ್ನು ವಶಪಡಿಸಿಕೊಂಡ ನ್ಯೂಜಿಲೆಂಡ್‌ ತಂಡದವರು ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲೂ ಶುಭಾರಂಭ ಮಾಡಿದೆ. ಇಲ್ಲಿ ಸೋಮವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಏಳು ವಿಕೆಟ್‌ಗಳ ಜಯ ಸಾಧಿಸಿದರು.

ವೇಗಿಗಳ ದಾಳಿಗೆ ನಲುಗಿ ಪಾಕಿಸ್ತಾನ ಕೇವಲ 105 ರನ್‌ಗಳಿಗೆ ಆಲೌಟ್‌ ಆಗಿತ್ತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 15.5 ಓವರ್‌ಗಳಲ್ಲಿ ಜಯ ಸಾಧಿಸಿತು. ಕಾಲಿನ್ ಮನ್ರೊ ಔಟಾಗದೆ ಗಳಿಸಿದ 49 ರನ್  (43 ಎಸೆತ; 2 ಸಿ, 3 ಬೌಂ) ತಂಡದ ಸುಲಭ ಗೆಲುವಿಗೆ ಕಾರಣವಾಯಿತು.

ಎಂಟು ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಮನ್ರೊ ಮತ್ತು ಬ್ರೂಸ್‌ ನೆರವಾದರು. ಮೂರನೇ ವಿಕೆಟ್‌ಗೆ ಇವರಿಬ್ಬರು 49 ರನ್ ಸೇರಿಸಿದರು. ಬ್ರೂಸ್ ಔಟಾದ ಬಳಿಕ ಕ್ರೀಸ್‌ಗೆ ಬಂದ ರಾಸ್ ಟೇಲರ್‌ ವೇಗವಾಗಿ ರನ್ ಗಳಿಸಿದರು. 13 ಎಸೆತಗಳಲ್ಲಿ 23 ರನ್‌ ಸಿಡಿಸಿದ ಅವರು ಮೂರು ಬೌಂಡರಿಗಳೊಂದಿಗೆ ಮಿಂಚಿದರು.

ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ನಾಲ್ಕು ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. 14 ಓವರ್‌ಗಳಾಗುವಷ್ಟರಲ್ಲಿ ತಂಡ 53 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಮಧ್ಯಮ ಕ್ರಮಾಂಕದ ಬಾಬರ್ ಆಜಮ್‌ ಏಕಾಂಗಿ ಹೋರಾಟ ನಡೆಸಿದರು. ಅವರಿಗೆ ಕೊನೆಯಲ್ಲಿ ಹಸನ್‌ ಅಲಿ ಸಹಕಾರ ನೀಡಿದ್ದರಿಂದ ತಂಡ ಮೂರಂಕಿ ಗಡಿ ದಾಟಿತು. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದೆರಲ್ಲರೂ ಎರಡಂಕಿ ದಾಟಲಾಗದೆ ವಾಪಸಾದರು.

ಸಂಕ್ಷಿಪ್ತ ಸ್ಕೋರ್‌

ಪಾಕಿಸ್ತಾನ:
19.4 ಓವರ್‌ಗಳಲ್ಲಿ 105ಕ್ಕೆ ಆಲೌಟ್‌ (ಬಾಬರ್ ಆಜಮ್‌ 41, ಹಸನ್‌ ಅಲಿ 23; ಸೇಥ್ ರಾನ್ಸೆ 26ಕ್ಕೆ3, ಟಿಮ್‌ ಸೌಥಿ 13ಕ್ಕೆ3, ಮಿಚೆಲ್‌ ಸಾಂಟ್ನರ್‌ 15ಕ್ಕೆ2); ನ್ಯೂಜಿಲೆಂಡ್‌: 15.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 106 (ಕಾಲಿನ್‌ ಮನ್ರೊ 49, ಬ್ರೂಸ್‌ 26, ರಾಸ್ ಟೇಲರ್‌ 22; ರುಮಾನ್ ರಯೀಸ್‌ 24ಕ್ಕೆ2).

ಫಲಿತಾಂಶ: ನ್ಯೂಜಿಲೆಂಡ್‌ಗೆ ಏಳು ವಿಕೆಟ್‌ಗಳ ಜಯ; ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ. ಪಂದ್ಯಶ್ರೇಷ್ಠ: ಕಾಲಿನ್ ಮನ್ರೊ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry