ವರ್ತಕರಿಗೆ ಶುಲ್ಕರಹಿತ ‘ಪೇಟಿಎಂ ಕ್ಯೂಆರ್‌’

7

ವರ್ತಕರಿಗೆ ಶುಲ್ಕರಹಿತ ‘ಪೇಟಿಎಂ ಕ್ಯೂಆರ್‌’

Published:
Updated:
ವರ್ತಕರಿಗೆ ಶುಲ್ಕರಹಿತ ‘ಪೇಟಿಎಂ ಕ್ಯೂಆರ್‌’

ಬೆಂಗಳೂರು: ಮೊಬೈಲ್‌ ಮೂಲಕ ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಪೇಟಿಎಂ ಸಂಸ್ಥೆಯು, ಚಿಲ್ಲರೆ ವರ್ತಕರಿಗೆ ‘ಪೇಟಿಎಂ ಕ್ಯೂಆರ್‌’ ಆಯ್ಕೆಯಲ್ಲಿ ಶುಲ್ಕರಹಿತವಾಗಿ ಗ್ರಾಹಕರಿಂದ ಹಣ ಸ್ವೀಕರಿಸುವ ಕೊಡುಗೆ ನೀಡಿದೆ.

‘ಕ್ಯೂಆರ್‌ ಕೋಡ್‌ ಮೂಲಕ ಪಡೆಯುವ ಹಣಕ್ಕೆ ಯಾವುದೇ ಮಿತಿ ಇರುವುದಿಲ್ಲ. ಆದರೆ, ನಗದು ಮಿತಿ ಹೆಚ್ಚಿದಂತೆಲ್ಲಾ ವರ್ತಕರು ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಗ್ರಾಹಕರು ಪಾವತಿಸುವ ಹಣ ನೇರವಾಗಿ ವರ್ತಕರ ಬ್ಯಾಂಕ್‌ ಖಾತೆಗೆ ಜಮಾ ಆಗಲಿದೆ’.

ಗ್ರಾಹಕರು ತಾವು ಖರೀದಿಸುವ ವಸ್ತುಗಳಿಗೆ ಕ್ಯೂಆರ್‌ಕೋಡ್‌ ಸ್ಕ್ಯಾನ್‌ ಮಾಡಿ, ಪೇಟಿಎಂ, ಯುಪಿಐ, ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಹೀಗೆ ಯಾವುದೇ ಪಾವತಿ ಆಯ್ಕೆಗಳ ಮೂಲಕವಾದರೂ ಹಣ ಪಾವತಿಸಬಹುದು. ಮೊಬೈಲ್‌ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಗ್ರಾಹಕರು ಮತ್ತು ವರ್ತಕರಿಗೆ ಈ ಆಯ್ಕೆ ಕಲ್ಪಿಸಲಾಗಿದೆ. ವರ್ತಕರಿಗೆ ವರ್ಗಾವಣೆ ಶುಲ್ಕ ಇಲ್ಲದೇ ಇರುವುದರಿಂದ ಅವರು ಗ್ರಾಹಕರಿಗೂ ಶುಲ್ಕ ವಿಧಿಸುವುದಿಲ್ಲ’ ಎಂದು ಸಂಸ್ಥೆಯ ಚಿಲ್ಲರೆ ವಹಿವಾಟಿನ ಆಫ್‌ಲೈನ್‌ ವಿಭಾಗದ ಮುಖ್ಯಸ್ಥ ಅಮಿತ್‌ ವೀರ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಂತರ್ಜಾಲದ ಸಂಪರ್ಕ ಇಲ್ಲದೇ ಗ್ರಾಹಕರಿಂದ ಹಣ ಪಡೆಯಲು ವರ್ತಕರಿಗೆ ಪೇಟಿಎಂ ಕ್ಯೂಆರ್‌ ಉತ್ತಮ ಆಯ್ಕೆಯಾಗಿದೆ. ಈ ಬಗ್ಗೆ ವರ್ತಕರಿಗೆ ತರಬೇತಿ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ₹ 500 ಕೋಟಿ ಹೂಡಿಕೆ ಮಾಡಲಾಗುವುದು’ ಎಂದು ತಿಳಿಸಿದರು.

ವರ್ತಕರು ಕ್ಯೂಆರ್‌ ಕೋಡ್‌ ಪಡೆಯಲು https://business.paytm.com/retail ಗೆ ಭೇಟಿ ನೀಡಿ ಉಚಿತವಾಗಿ ಈ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ವಹಿವಾಟು ಮತ್ತು ಬ್ಯಾಂಕ್‌ ವಿವರಗಳನ್ನು ನೀಡಬೇಕು.

ಹಣ ಸ್ವೀಕರಿಸಲು ಸಂಸ್ಥೆಯ ನಿಯಮಗಳಿಗೆ ಒಪ್ಪಿಗೆ ನೀಡಿದ ಬಳಿಕ ಕ್ಯೂಆರ್ ಕೋಡ್‌ ಸೃಷ್ಟಿಯಾಗುತ್ತದೆ. ಅದನ್ನು ಪ್ರಿಂಟ್‌ ಮಾಡಿ ಗ್ರಾಹಕರ ಗಮನ ಸೆಳೆಯುವ ಸ್ಥಳದಲ್ಲಿ ಅಂಟಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry