ಅಶೋಕ್ ಲೇಲ್ಯಾಂಡ್ ₹ 400 ಕೋಟಿ ಹೂಡಿಕೆ

7

ಅಶೋಕ್ ಲೇಲ್ಯಾಂಡ್ ₹ 400 ಕೋಟಿ ಹೂಡಿಕೆ

Published:
Updated:

ನವದೆಹಲಿ: ಲಘು ವಾಣಿಜ್ಯ ವಾಹನಗಳ ರಫ್ತು ವಹಿವಾಟು ವಿಸ್ತರಣೆಗಾಗಿ ಅಶೋಕ್‌ ಲೇಲ್ಯಾಂಡ್‌ ಕಂಪನಿ ₹400 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

ಸದ್ಯ ಈ ವಾಹನಗಳ ರಫ್ತು ವಹಿವಾಟು ಶೇ 5 ರಷ್ಟಿದೆ. ಮುಂದಿನ ಮೂರು ವರ್ಷಗಳಲ್ಲಿ ಅದನ್ನು ಶೇ 25ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕಂಪನಿಯ ಲಘು ವಾಣಿಜ್ಯ ವಾಹನಗಳ ವಿಭಾಗದ ಅಧ್ಯಕ್ಷ ನಿತಿನ್ ಸೇಥಿ ತಿಳಿಸಿದ್ದಾರೆ.

ರಷ್ಯಾ, ಉಕ್ರೇನ್‌ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ವಹಿವಾಟು ವಿಸ್ತರಣೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸದ್ಯ, ದೇಶದ ಎಲ್‌ಸಿವಿ ಮಾರುಕಟ್ಟೆಯಲ್ಲಿ ಶೇ 15 ರಷ್ಟು ಪಾಲು ಹೊಂದಿದ್ದೇವೆ. ಅದನ್ನು ಶೇ 20 ರಿಂದ ಶೇ 30ಕ್ಕೆ ಹೆಚ್ಚಿಸುವ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಬಲಬದಿ ಚಾಲಕ ಸೌಲಭ್ಯ ಇರುವ ವಿಭಾಗವನ್ನು ತಲುಪಲು ಗಮನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry