ಎಂಜಿನಿಯರಿಂಗ್‌ ‘ಸುಪ್ರೀಂ’ ಸ್ಪಷ್ಟನೆ

7

ಎಂಜಿನಿಯರಿಂಗ್‌ ‘ಸುಪ್ರೀಂ’ ಸ್ಪಷ್ಟನೆ

Published:
Updated:

ನವದೆಹಲಿ: ಹಿಂದಿನ ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ 2001 ಮತ್ತು 2005ರ ನಡುವೆ ದೂರ ಶಿಕ್ಷಣದ ಮೂಲಕ ಎಂಜಿನಿಯರಿಂಗ್‌ ಪದವಿ ಪಡೆದವರು 2018ರ ಜುಲೈ 31ರ ನಂತರ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಸ್ಪಷ್ಟಪಡಿಸಿದೆ.

ಪದವಿ ಉಳಿಸಿಕೊಳ್ಳಬೇಕಾದರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮೇ–ಜೂನ್‌ನಲ್ಲಿ ನಡೆಸಲಿರುವ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

ಇವರು ಮಾತ್ರವಲ್ಲದೇ ದೂರ ಶಿಕ್ಷಣದ ಮೂಲಕ ಸ್ನಾತಕೋತ್ತರ ಎಂಜಿನಿಯರಿಂಗ್‌ ಪದವಿ ಪಡೆದವರು ಕೂಡ ಈ ಪರೀಕ್ಷೆಯನ್ನು ಬರೆಯಲೇಬೇಕು ಎಂದು ನ್ಯಾಯಮೂರ್ತಿಗಳಾದ ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಯು.ಯು. ಲಲಿತ್‌ ಅವರಿದ್ದ ನ್ಯಾಯಪೀಠ ಹೇಳಿದೆ.

ಇಂತಹ ಪದವೀಧರರಿಗೆ 2018ರ ಜೂನ್‌–ಮೇ ತಿಂಗಳಲ್ಲಿ ಪರೀಕ್ಷೆ ನಡೆಸುವಂತೆ 2017ರ ನವೆಂಬರ್‌ 3ರಂದು ಸುಪ್ರೀಂ ಕೋರ್ಟ್‌ ಎಐಸಿಟಿಇಗೆ ನಿರ್ದೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry