’ಮೋದಿ ಜೀ, ರೈತರು, ಕಾರ್ಮಿಕರನ್ನು ಅಪ್ಪಿಕೊಳ್ಳುವುದೂ ಮುಖ್ಯ’

7

’ಮೋದಿ ಜೀ, ರೈತರು, ಕಾರ್ಮಿಕರನ್ನು ಅಪ್ಪಿಕೊಳ್ಳುವುದೂ ಮುಖ್ಯ’

Published:
Updated:

ನವದೆಹಲಿ: ಮೋದಿ ಜೀ, ರೈತರು, ಕಾರ್ಮಿಕರು ಮತ್ತು ಸೈನಿಕರನ್ನು ಅಪ್ಪಿಕೊಳ್ಳುವುದೂ ಮುಖ್ಯ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಸಾಮಾನ್ಯ ಮನುಷ್ಯ ಎಂದು ಕರೆದುಕೊಳ್ಳುತ್ತಾರೆ. ಆದರೆ, ಗಣ್ಯ ವ್ಯಕ್ತಿಗಳನ್ನು ಮಾತ್ರ ಅಪ್ಪಿಕೊಳ್ಳುತ್ತಾರೆ ಹೊರತು ರೈತರು, ಕಾರ್ಮಿಕರು ಮತ್ತು ಸೈನಿಕರನ್ನಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.

‘ನಾನೊಬ್ಬ ಸಾಮಾನ್ಯ ಮನುಷ್ಯ. ಹಾಗಾಗಿ ರಾಜತಾಂತ್ರಿಕ ನಿಯಮಗಳನ್ನು ಬಿಟ್ಟು ಅಪ್ಪುಗೆಯ ಮೂಲಕ ವಿವಿಧ ರಾಷ್ಟ್ರಗಳ ನಾಯಕರನ್ನು ಸ್ವಾಗತಿಸಿದ್ದೇನೆ’ ಎಂದು ಮೋದಿ ಅವರು ವಿವಿಧ ದೇಶಗಳ ನಾಯಕರನ್ನು ಅಪ್ಪಿಕೊಳ್ಳುವುದನ್ನು ಟೀಕಿಸಿದ್ದವರಿಗೆ ಟಿ.ವಿ ಸಂದರ್ಶವೊಂದರಲ್ಲಿ ಈಚೆಗೆ ಪ್ರತಿಕ್ರಿಯೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry