ವಸೂಲಿಯಾಗದ ಸಾಲ ₹ 9.5 ಲಕ್ಷ ಕೋಟಿ

7

ವಸೂಲಿಯಾಗದ ಸಾಲ ₹ 9.5 ಲಕ್ಷ ಕೋಟಿ

Published:
Updated:
ವಸೂಲಿಯಾಗದ ಸಾಲ ₹ 9.5 ಲಕ್ಷ ಕೋಟಿ

ನವದೆಹಲಿ: ಬ್ಯಾಂಕಿಂಗ್‌ ವಲಯದ ವಸೂಲಿಯಾಗದ ಸಾಲದ (ಎನ್‌ಪಿಎ) ಪ್ರಮಾಣ ಏರಿಕೆಯಾಗುತ್ತಲೇ ಇದೆ. 2018ರ ಮಾರ್ಚ್‌ ವೇಳೆಗೆ ಇದು ₹ 9.5 ಲಕ್ಷ ಕೋಟಿಗೆ ಏರಿಕೆ ಕಾಣಲಿದೆ ಎಂದು  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಮತ್ತು ಕ್ರಿಸಿಲ್‌ ಜಂಟಿಯಾಗಿ ಸಿದ್ಧಪಡಿಸಿರುವ ವರದಿಯಲ್ಲಿ ಅಂದಾಜಿಸಲಾಗಿದೆ.

2017ರ ಮಾರ್ಚ್‌ ಅಂತ್ಯಕ್ಕೆ ಈ ಮೊತ್ತ ₹ 8 ಲಕ್ಷ ಕೋಟಿಗಳಷ್ಟಿತ್ತು. ಕೇಂದ್ರ ಸರ್ಕಾರ ಬ್ಯಾಂಕ್‌ಗಳಿಗೆ ಪುನರ್‌ಧಾನ ಯೋಜನೆ ಸೇರಿದಂತೆ ‘ಎನ್‌ಪಿಎ’ ತಗ್ಗಿಸಲು ಬ್ಯಾಂಕ್‌ಗಳಿಗೆ ಸಾಕಷ್ಟು ಅವಕಾಶ ನೀಡಲಾಗಿದೆ. ಕಂಪನಿಗಳ ಸಂಪತ್ತಿನ ಪುನರ್‌ರಚನೆ (ಎಆರ್‌ಸಿ) ಪ್ರಕ್ರಿಯೆ ಮೂಲಕವೂ ಎನ್‌ಪಿಎ ತಗ್ಗಿಸಲು ಅವಕಾಶ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2019ರ ಜೂನ್‌ನಲ್ಲಿ ಸಂಪತ್ತಿನ ಪುನರ್‌ರಚನೆ ಶೇ 12ಕ್ಕೆ ಇಳಿಕೆ ಕಾಣುವ ಸಾಧ್ಯತೆ ಇದೆ. ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯವು ₹ 1 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ಇದೆ.

ದಿವಾಳಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಿಂದ ಮಾತ್ರವೇ ಬ್ಯಾಂಕಿಂಗ್‌ ವಲಯದ ಆರ್ಥಿಕ ಸಮಸ್ಯೆ ನಿವಾರಣೆ ಸಾಧ್ಯ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಲೋಹ ಶೇ 30, ನಿರ್ಮಾಣ ವಲಯ (ಶೇ 25), ವಿದ್ಯುತ್‌ (ಶೇ 15) ವಲಯಗಳು ಅತಿ ಹೆಚ್ಚಿನ ಸಾಲ ಬಾಕಿ ಉಳಿಸಿಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry