ಕನೌಜ್‌ನಿಂದ ಸ್ಪರ್ಧೆ: ಅಖಿಲೇಶ್ ಯಾದವ್ ಘೋಷಣೆ

7

ಕನೌಜ್‌ನಿಂದ ಸ್ಪರ್ಧೆ: ಅಖಿಲೇಶ್ ಯಾದವ್ ಘೋಷಣೆ

Published:
Updated:
ಕನೌಜ್‌ನಿಂದ ಸ್ಪರ್ಧೆ: ಅಖಿಲೇಶ್ ಯಾದವ್ ಘೋಷಣೆ

ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನೌಜ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೋಮವಾರ ತಿಳಿಸಿದರು.

ಅಖಿಲೇಶ್ ಯಾದವ್ ಹೆಂಡತಿ ಡಿಂಪಲ್ ಯಾದವ್, ಪ್ರಸ್ತುತ ಕನೌಜ್ ಕ್ಷೇತ್ರದ ಸಂಸದರಾಗಿದ್ದಾರೆ. ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮೈನ್‌ಪುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

2014ರ ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್,  ಅಜಂಗಡ ಮತ್ತು ಮೈನ್‌ಪುರಿ ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಜಯ ಸಾಧಿಸಿದ್ದರು. ಆದರೆ, ನಂತರ ಅಜಂಘಡ ಕ್ಷೇತ್ರ ಉಳಿಸಿಕೊಂಡು ಮೈನ್‌ಪುರಿ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮುಲಾಯಂ ಮೊಮ್ಮಗ ತೇಜ್ ಪ್ರತಾಪ್ ಯಾದವ್ ಜಯಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry