ತರಳಬಾಳು ಹುಣ್ಣಿಮೆ ಮಹೋತ್ಸವ ಇಂದಿನಿಂದ

7

ತರಳಬಾಳು ಹುಣ್ಣಿಮೆ ಮಹೋತ್ಸವ ಇಂದಿನಿಂದ

Published:
Updated:
ತರಳಬಾಳು ಹುಣ್ಣಿಮೆ ಮಹೋತ್ಸವ ಇಂದಿನಿಂದ

ಜಗಳೂರು: ಸುಮಾರು 25 ವರ್ಷಗಳ ನಂತರ ಜಗಳೂರು ಪಟ್ಟಣ ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ನಡೆಯುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ಕ್ಕೆ ಸಜ್ಜಾಗಿದೆ. ಎರಡು ವರ್ಷಗಳ ವಿರಾಮದ ನಂತರ ನಡೆಯುತ್ತಿರುವ 9 ದಿನಗಳ ಆಧ್ಯಾತ್ಮಿಕ–ಸಾಂಸ್ಕೃತಿಕ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ.

ಇಲ್ಲಿನ ದಾವಣಗೆರೆ ರಸ್ತೆಯ ನ್ಯಾಯಾಲಯದ ಸಂಕೀರ್ಣದ ಎದುರು, ಸುಮಾರು 20 ಎಕರೆ ಪ್ರದೇಶದಲ್ಲಿ ವಿಶಾಲ ಹಾಗೂ ಸುಂದರವಾದ ವೇದಿಕೆ ಮತ್ತು ತರಳಬಾಳು ಮಠದ ಭವ್ಯತೆಯನ್ನು ಸಾರುವ ಶ್ವೇತ ಮಂಟಪ ತಲೆ ಎತ್ತಿದೆ.

2015ರಲ್ಲಿ ಚನ್ನಗಿರಿ ಪಟ್ಟಣದಲ್ಲಿ ಕೊನೆಯ ಬಾರಿ ‘ಹುಣ್ಣಿಮೆ ಮಹೋತ್ಸವ’ ನಡೆದಿತ್ತು. 2016ರ ಉತ್ಸವ ಜಗಳೂರಿನಲ್ಲಿ ನಿಗದಿಯಾಗಿತ್ತು. ಆದರೆ ಬರಗಾಲದ ಕಾರಣ ಎರಡು ವರ್ಷ ಈ ಉತ್ಸವ ನಡೆದಿರಲಿಲ್ಲ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಮಂಗಳವಾರ ಸಂಜೆ ನಡೆಯುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದಾರೆ.

ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಉತ್ಸವ ಜರುಗಲಿದೆ. ಜ. 31ರಂದು ಮಧ್ಯಾಹ್ನ 2.30ರಿಂದ 5.30ರ ವರೆಗೆ ಉತ್ಸವ ನಡೆಯಲಿದೆ. ಸಂಜೆ 6ಕ್ಕೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪೀಠದ ಪರಂಪರೆಯಂತೆ ‘ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾರೋಹಣ’ ಮಾಡುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry