2017: ಎರಡನೇ ಅತ್ಯಂತ ‘ಬಿಸಿ ವರ್ಷ’

7

2017: ಎರಡನೇ ಅತ್ಯಂತ ‘ಬಿಸಿ ವರ್ಷ’

Published:
Updated:
2017: ಎರಡನೇ ಅತ್ಯಂತ ‘ಬಿಸಿ ವರ್ಷ’

ವಾಷಿಂಗ್ಟನ್‌: 2017– ಜಾಗತಿಕವಾಗಿ ಇದುವರೆಗಿನ ಎರಡನೇ ಅತ್ಯಂತ ಹೆಚ್ಚು ಬಿಸಿಯಾದ ವರ್ಷವಾಗಿತ್ತು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ದೀರ್ಘ ಸಮಯದಿಂದ ಜಾಗತಿಕ ಉಷ್ಣಾಂಶ ಏರುಗತಿಯಲ್ಲಿ ಸಾಗುತ್ತಿರುವ ಪ್ರವೃತ್ತಿ ಮುಂದುವರೆದಿರುವುದನ್ನೂ ಅವರು ಅಂಕಿ ಅಂಶಗಳ ವಿಶ್ಲೇಷಣೆಯಿಂದ ಕಂಡುಕೊಂಡಿದ್ದಾರೆ.

1951ರಿಂದ 1980ವರೆಗಿನ ಸರಾಸರಿ ತಾಪಮಾನಕ್ಕೆ ಹೋಲಿಸಿದರೆ ಜಾಗತಿಕವಾಗಿ 2017ರ ಸರಾಸರಿ ಉಷ್ಣತೆ 0.90 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು ಎಂದು ನಾಸಾದ ಗೊಡ್ಡಾರ್ಡ್‌ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ (ಜಿಐಎಸ್‌ಎಸ್‌) ವಿಜ್ಞಾನಿಗಳು ಹೇಳಿದ್ದಾರೆ.

ಅವರ ಪ್ರಕಾರ, 2016ರಲ್ಲಿ ಜಗತ್ತಿನೆಲ್ಲೆಡೆ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಆದರೆ, ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತದ (ಎನ್‌ಒಎಎ) ವಿಜ್ಞಾನಿಗಳು ನಡೆಸಿದ ಸ್ವತಂತ್ರ ವಿಶ್ಲೇಷಣೆ ಪ್ರಕಾರ, ಕಳೆದ ವರ್ಷ (2017) ಜಾಗತಿಕವಾಗಿ ಮೂರನೇ ಅತ್ಯಂತ ಹೆಚ್ಚು ಉಷ್ಣತೆ ದಾಖಲಾಗಿತ್ತು.

ಜಾಗತಿಕ ತಾಪಮಾನವನ್ನು ವಿಶ್ಲೇಷಣೆಗೆ ಒಳಪಡಿಸಲು ಎರಡೂ ಸಂಸ್ಥೆಗಳು ಭಿನ್ನ ವಿಧಾನಗಳನ್ನು ಅನುಸರಿಸಿದ್ದರಿಂದ ಈ ವ್ಯತ್ಯಾಸ ಕಂಡು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry