ಇನ್‌ಸ್ಪೆಕ್ಟರ್‌ಗೆ ಬೆದರಿಕೆ; ಮೂವರಿಗೆ ನೋಟಿಸ್‌ ಜಾರಿ

7

ಇನ್‌ಸ್ಪೆಕ್ಟರ್‌ಗೆ ಬೆದರಿಕೆ; ಮೂವರಿಗೆ ನೋಟಿಸ್‌ ಜಾರಿ

Published:
Updated:

ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸಲು ನಿಯೋಜನೆಗೊಂಡಿದ್ದ ಬಸವನಗುಡಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಅವರನ್ನು ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಮೂವರು ಆರೋಪಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ವಾಹನ ತೆರವು ಮಾಡಲು ಸ್ಥಳೀಯ ನಿವಾಸಿಗಳಾದ ಮಂಜು, ಉಮೇಶ್‌ ಹಾಗೂ ಇನ್ನೊಬ್ಬರು ನಿರಾಕರಿಸಿದ್ದರು. ಇನ್‌ಸ್ಪೆಕ್ಟರ್‌ ಅವರನ್ನು ನಿಂದಿಸಿ, ‘ನಿನಗೆ ಒಂದು ಗತಿ ಕಾಣಿಸುತ್ತೇವೆ’ ಎಂದು ಬೆದರಿಕೆ ಸಹ ಹಾಕಿದ್ದರು. ಇನ್‌ಸ್ಪೆಕ್ಟರ್‌ ಬನಶಂಕರಿ ಠಾಣೆಗೆ ದೂರು ನೀಡಿದ್ದರು.

‘ಅವರು ಠಾಣೆಗೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry