ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೋಸ್‌ನಲ್ಲಿ ಪ್ರಧಾನಿ ಮೋದಿ

Last Updated 23 ಜನವರಿ 2018, 10:55 IST
ಅಕ್ಷರ ಗಾತ್ರ

ದಾವೋಸ್‌ (ಸ್ವಿಟ್ಜರ್ಲೆಂಡ್‌): ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ದಾವೋಸ್‌ಗೆ ಬಂದಿಳಿದಿದ್ದಾರೆ.

ಜ್ಯೂರಿಚ್‌ನಿಂದ ದಾವೋಸ್‌ಗೆ ಬಂದಿಳಿದ ಅವರು ಸ್ವಿಟ್ಜರ್‌ಲೆಂಡ್‌ ಅಧ್ಯಕ್ಷ ಅಲೇನ್‌ ಬರ್‌ಸೆಟ್ಯಾಂಡ್‌ ಅವರೊಂದಿಗೆ ಮಾತುಕತೆ ನಡೆಸಿದರು.

ಭಾರತ, ರಾತ್ರಿ ಆಯೋಜಿಸಿದ್ದ ಔತಣಕೂಟಕ್ಕೆ 18 ರಾಷ್ಟ್ರಗಳ 40 ದಿಗ್ಗಜ ಉದ್ಯಮಿಗಳು ಹಾಜರಾಗಿದ್ದರು. 24ನೇ ಕ್ರಿಸ್ಟಲ್‌ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್‌ ನಟ ಶಾರುಕ್‌ ಖಾನ್‌ ಹಾಗೂ ಪಾಶ್ಚಾತ್ಯ ಸಂಗೀತಗಾರ ಎಲ್ಟನ್‌ ಜಾನ್‌ ಅವರನ್ನು ಸತ್ಕರಿಸಲಾಯಿತು. 

ದಾವೋಸ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಜಾಗತಿಕ ನಾಯಕರನ್ನು ಉದ್ದೇಶಿಸಿ ಪ್ರದಾನ ಭಾಷಣ ಮಾಡಲಿದ್ದಾರೆ.

ಭಾರತದಲ್ಲಿ ಹೂಡಿಕೆ ಮತ್ತು ವಹಿವಾಟಿಗೆ ಇರುವ ಅವಕಾಶಗಳ ಬಗ್ಗೆ ಮೋದಿ ಅವರು ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ನಂತರ ಅವರು, ಜಾಗತಿಕ ಉದ್ಯಮ ಮಂಡಳಿಯ 120 ಸದಸ್ಯರ ಜತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನವಿಡೀ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  20 ವರ್ಷಗಳ ನಂತರ ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಉದ್ಯಮಿಗಳು, ಸಿಇಒಗಳು ಮತ್ತು ವಿವಿಧ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಸೇರಿದಂತೆ 2,000ಕ್ಕೂ ಜನರು ಭಾರತದ ನಿಯೋಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT