ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್: ಉಮಾದೇವಿಗೆ ಪ್ರಶಸ್ತಿ

7

ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್: ಉಮಾದೇವಿಗೆ ಪ್ರಶಸ್ತಿ

Published:
Updated:
ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್: ಉಮಾದೇವಿಗೆ ಪ್ರಶಸ್ತಿ

ಬೆಂಗಳೂರು: ಕರ್ನಾಟಕದ ಆರ್. ಉಮಾದೇವಿ ನಾಗರಾಜ್ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು.

ಸೋಮವಾರ ನಡೆದ ಫೈನಲ್‌ ಪಂದ್ಯದಲ್ಲಿ ಉಮಾದೇವಿ 3–1 (76-51, 77-23, 31-76,76-65) ರಿಂದ ರಾಜ್ಯದವರೇ ಆದ ಚಿತ್ರಾ ಅವರನ್ನು ಸೋಲಿಸಿದರು.

ಪಂಕಜ್‌ಗೆ ಗೆಲುವು: ಪುರುಷರ ‘ಎ’ ಗುಂಪಿನ ಪಂದ್ಯದಲ್ಲಿ ಪಿ.ಎಸ್‌.ಪಿ.ಬಿ ತಂಡದ ಪಂಕಜ್ ಅಡ್ವಾನಿ 3–0ಯಿಂದ ರೈಲ್ವೆಸ್‌ ತಂಡದ ಆದಿತ್ಯ ಆಗರವಾಲ್ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಗುಜರಾತ್‌ನ ವಿಶಾಲ್ ಗುಂಡ್ರೇಚಾ 3–1 ರಿಂದ ಬಿಹಾರದ ತುಷಾರ್ ಶ್ರೇಷ್ಠ ಅವರನ್ನು ಸೋಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry