ಶಾಲಾ ದಿನಗಳಲ್ಲೇ ಕುದುರಿದ ಕ್ರಿಕೆಟ್‌

7

ಶಾಲಾ ದಿನಗಳಲ್ಲೇ ಕುದುರಿದ ಕ್ರಿಕೆಟ್‌

Published:
Updated:
ಶಾಲಾ ದಿನಗಳಲ್ಲೇ ಕುದುರಿದ ಕ್ರಿಕೆಟ್‌

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಎಬಿ ಡಿವಿಲಿಯರ್ಸ್ ಮತ್ತು ಫಾಫ್‌ ಡು ಪ್ಲೆಸಿ ಅವರ ಕ್ರಿಕೆಟ್‌ ಜೀವನ ಬೆಳಗಿದ್ದು ಶಾಲಾ ದಿನಗಳಲ್ಲಿ. ಈ ವಿಷಯವನ್ನು ಅವರ ಅಂದಿನ ಕೋಚ್‌ ಡಿಯಾನ್ ಬೋಟ್ಸ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಶಾಲಾ ಕ್ರಿಕೆಟ್‌ಗೆ ತುಂಬ ಮಹತ್ವವಿದೆ. ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅಲ್ಲಿನ ತಂಡಗಳ ಆಟಗಾರರು ಕೇಪ್‌ಟೌನ್‌ನಿಂದ ಡರ್ಬನ್‌, ಡರ್ಬನ್‌ನಿಂದ ಜೊಹಾನ್ಸ್‌ಬರ್ಗ್‌ವರೆಗೂ ಪ್ರಯಾಣ ಮಾಡುತ್ತಾರೆ. ಇಂಥ ಟೂರ್ನಿಯೊಂದರಲ್ಲಿ ಇವರಿಬ್ಬರು ಬೆಳಕಿಗೆ ಬಂದಿದ್ದರು ಎಂದು ಬೋಟ್ಸ್ ಹೇಳಿದರು.

‘ಅಂದಿನ ದಿನಗಳಲ್ಲಿ ನಮ್ಮ ಶಾಲಾ ತಂಡದ ವಿರುದ್ಧ ಆಡುತ್ತಿದ್ದವರ ಪೈಕಿ ಹಾಶೀಂ ಆಮ್ಲಾ ಮತ್ತು ಇಮ್ರಾನ್ ಖಾನ್‌ ಅವರಂಥ ದಿಗ್ಗಜ ಆಟಗಾರರು ಇದ್ದರು. ಒಂದು ದಿನ ಪಂದ್ಯವೊಂದ ರಲ್ಲಿ ಎದುರಾಳಿ ತಂಡವನ್ನು ನಮ್ಮ ತಂಡದವರು 140 ರನ್‌ಗಳಿಗೆ ಕೆಡವಿದ್ದರು. ಗುರಿ ಬೆನ್ನತ್ತಿದ ನಮ್ಮ ತಂಡ ಆರಂಭದಲ್ಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಫಾಫ್ ಮತ್ತು ಡಿವಿಲಿಯರ್ಸ್‌ ತಂಡಕ್ಕೆ ಆಸರೆಯಾದರು. ಆದರೆ ಇಮ್ರಾನ್ ಖಾನ್ ಎಸೆತಗಳನ್ನು ಎದುರಿಸಲು ಫಾಫ್‌ ಪರದಾಡುತ್ತಿದ್ದುದು ನನ್ನ ಗಮನಕ್ಕೆ ಬಂದಿತು’ ಎಂದು ಅವರು ವಿವರಿಸಿದರು.

‘ಪಾನೀಯ ವಿರಾಮದ ಸಂದರ್ಭದಲ್ಲಿ ನನ್ನ ಬಳಿ ಬಂದ ಡಿವಿಲಿಯರ್ಸ್‌ ಈ ಪಿಚ್‌ನಲ್ಲಿ ಮಿಂಚುವ ವಿಶ್ವಾಸ ನನಗಿದ್ದು ಇದಕ್ಕೆ ಅವಕಾಶ ನೀಡುವಂತೆ ಫಾಫ್‌ಗೆ ತಿಳಿಸಿ ಎಂದು ಕೋರಿದರು. ನಂತರ ನಾನು ಫಾಫ್ ಬಳಿಗೆ ಹೋಗಿ ನಿನಗೆ ಇಲ್ಲಿ ಆಡುವುದು ಕಷ್ಟವಾಗುತ್ತಿದೆ ಎಂದೆನಿಸುತ್ತಿದೆ ಎಂದೆ. ಅದನ್ನು ಫಾಫ್ ಒಪ್ಪಿಕೊಂಡರು. ಆಗ ನಾನು ಒಂಟಿ ರನ್ ಗಳಿಸಿ ಡಿವಿಲಿಯರ್ಸ್‌ಗೆ ಅವಕಾಶ ನೀಡು ಎಂದು ಹೇಳಿದೆ. ಅವರು ಹಾಗೆಯೇ ಮಾಡಿದರು. ಡಿವಿಲಿಯರ್ಸ್ ಮಿಂಚಿನ ಬ್ಯಾಟಿಂಗ್ ನಡೆಸಿದರು’ ಎಂದು ಬೋಟ್ಸ್‌ ನೆನಪಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry