ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

7

ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

Published:
Updated:
ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

ಲಕ್ನೋ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ, ಆಗ್ರಾದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ ಅವರು ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆದರಿಕೆಯೊಡ್ಡಿದ ಆಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಆಗ್ರಾದ ಬೊಡಾಲಾ ಔಟ್‍ಪೋಸ್ಟ್ ಉಸ್ತುವಾರಿ ವಹಿಸಿದ್ದ ಸಬ್ ಇನ್ಸ್ ಪೆಕ್ಟರ್ ಮಹೇಶ್ ಪಾಲ್ ಯಾದವ್ ಅವರಿಗೆ ಬೆದರಿಕೆಯೊಡ್ಡಿರುವ ಆಡಿಯೊ ಇದಾಗಿದೆ.  ಒತ್ತುವರಿ ಮಾಡುವುದನ್ನು ವಿರೋಧಿಸಿ ಮಹೇಶ್ ಪಾಲ್ ಯಾದವ್ ಅವರು ಆ ಪ್ರದೇಶದಲ್ಲಿ ವ್ಯಾಪಾರ ನಡೆಸದಂತೆ ಆದೇಶ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವರು ಯಾದವ್ ಅವರು ತಮ್ಮ ಪ್ರದೇಶದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡುವುದಿಲ್ಲ ಎಂದು ಆರೋಪಿಸಿದ್ದರು.

ಫೋನ್ ಸಂಭಾಷಣೆಯಲ್ಲಿ ಏನಿದೆ?
ಮಹೇಶ್ ಪಾಲ್ ಅವರಿಗೆ ಫೋನ್ ಮಾಡಿದ ಕಟೆರಿಯಾ ಅವರು, ಮಹೇಶ್ ಪಾಲ್ ಯಾದವ್ ಜೀ, ನೀನು ಯಾದವ್ ಆಗಿರಬಹುದು ಆದರೆ ಗೂಂಡಾ ಅಲ್ಲ, ಯೋಗಿ ಅವರಿಗೇ ಸವಾಲು ಹಾಕುತ್ತಿದ್ದೀಯಾ? ಇನ್ನೊಮ್ಮೆ ಇದೇ ರೀತಿ ಮಾಡಿದರೆ ನಿನ್ನನ್ನು ಕೆಲಸದಿಂದ ಕಿತ್ತು ಹಾಕಿ ಜೈಲಿಗೆ ಕಳಿಸುತ್ತೇನೆ.
ಆ ರೀತಿ ಗೂಂಡಾಗಿರಿ ಮಾಡಿದರೆ ನೀನು ಹಲ್ಲೆ ಮಾಡಿರುವ ಪರಿಶಿಷ್ಟ ಜಾತಿಯ ವ್ಯಕ್ತಿಯಿಂದಲೇ ನಿನ್ನ ವಿರುದ್ಧ ಆಯೋಗಕ್ಕೆ ದೂರು ನೀಡಿ ಎಫ್‍ಐಆರ್ ಹಾಕಿ ಜೈಲಿಗೆ ಕಳುಹಿಸುತ್ತೀನಿ. ನೀನು ಹಲ್ಲೆ ಮಾಡಿದ ವ್ಯಕ್ತಿ ಇಲ್ಲಿ ಅಳುತ್ತಿದ್ದಾನೆ. ಆಯೋಗಕ್ಕೆ ದೂರು ನೀಡಿದರೆ ನಿನಗೆ ಜಾಮೀನು ಸಿಗುವುದಿಲ್ಲ, ಕೆಲಸದಲ್ಲಿ ಬಡ್ತಿಯೂ ಸಿಗಲಾರದು.

ಇಷ್ಟು ಹೇಳಿದ ನಂತರ ಅತ್ತಲಿಂದ ಎಸ್‍ಐ ಯಾದವ್ ಮಾತು
ನಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ. ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಏನೂ ಮಾತನಾಡಲಿಲ್ಲ ಎನ್ನುತ್ತಿದ್ದಾರೆ.

ಎಸ್‍ಐ ಯಾದವ್ ಅವರಿಗೆ ಬೆದರಿಕೆಯೊಡ್ಡಿರುವ ಈ ಆಡಿಯೊ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಎಸ್‍ಎಸ್‍ಪಿ ಅಮಿತ್ ಪಾಠಕ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry