ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯಿಂದ ರೈತರಿಗೆ ಲಾಭ

Last Updated 23 ಜನವರಿ 2018, 6:47 IST
ಅಕ್ಷರ ಗಾತ್ರ

ರಾಯಚೂರು: ಕೃಷಿಯಲ್ಲಿನ ವಿವಿಧ ಸಂಶೋಧನೆಗಳನ್ನು ಪ್ರತ್ಯಕ್ಷವಾಗಿ ನೋಡಿ, ಕಲಿತು ಅವುಗಳನ್ನು ತಮ್ಮ ಹೊಲಗಳಲ್ಲಿ ಅಳವಡಿಸಿ ಕೊಳ್ಳುವುದರಿಂದ ರೈತರು ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಗುತ್ತಿ ಜಂಬುನಾಥ ಸಲಹೆ ನೀಡಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕ ಹಾಗೂ ಐಸಿಎಆರ್-ರಾಷ್ಟ್ರೀಯ ಬೀಜ ಯೋಜನೆಯಿಂದ ಈಚೆಗೆ ಏರ್ಪಡಿಸಿದ್ದ ಬೀಜೋತ್ಪಾದನಾ ತರಬೇತಿ ಹಾಗೂ ಕಡಲೆ ತಳಿಗಳ ಕ್ಷೇತ್ರೋತ್ಸ ವವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಸಂಶೋಧನೆಯ ಫಲ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಲು ರೈತರು ಪ್ರಜ್ಞಾವಂತರಾಗಬೇಕು ಎಂದರು.

ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಸಿದ್ದಾರೆಡ್ಡಿ ಮಾತನಾಡಿ, ಕಡಲೆ ಬೆಳೆಯಲ್ಲಿ ಸೂಕ್ತ ಸಮಯ ದಲ್ಲಿ ನೀರು ಕೊಡುವುದರ ಮುಖಾಂತರ ಮತ್ತು ಹೊಸ ತಳಿಗಳನ್ನು ಉಪಯೋಗಿಸಿಕೊಂಡು ಇಳುವರಿಯನ್ನು ಹೆಚ್ಚಿಗೆ ಮಾಡಿ ಕೊಳ್ಳಬಹುದು ಎಂದು ತಿಳಿಸಿದರು.

ವಿಶೇಷಾಧಿಕಾರಿ(ಬೀಜ) ಡಾ.ಬಸವೇಗೌಡ ಮಾತನಾಡಿ, ರೈತರು ತಮ್ಮ ಭೂಮಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಂಡು, ವಿವಿಧ ಬೆಳೆಯ ಹಂತದಲ್ಲಿ ಸುಧಾರಿತ ಕ್ರಮಗಳನ್ನು ಅನುಸರಿಸುವುದರಿಂದ ಬೇಸಾಯದ ಖರ್ಚು ಕಡಿಮೆ ಮಾಡಿ, ಇಳುವರಿ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.

ಕೃಷಿ ವಾಣಿಜ್ಯ ಅಭಿವೃದ್ಧಿ ಘಟಕದ ಮುಖ್ಯಸ್ಥ ಡಾ.ಆರ್.ಲೊಕೇಶ್ ಮಾತನಾಡಿ, ಮಣ್ಣಿನ ಗುಣಧರ್ಮ ಬೆಳೆಯ ಇಳುವರಿ ಮತ್ತು ಗುಣಮಟ್ಟದ ಆಧಾರದ ಮೇಲೆ ರಾಜ್ಯದ ವಿವಿಧ ಭಾಗಗಳಲ್ಲಿ ಯಾವ ಬೆಳೆ ಹೆಚ್ಚು ಲಾಭದಾಯಕಯೆಂದು ಗುರುತಿಸಿ ಬೆಳೆಯುವುದರಿಂದ ರೈತರಿಗೆ ಆಗುವ ನಷ್ಟವನ್ನು ಕಡಿಮೆ ಮಾಡಬಹುದು. ಇಳುವರಿಯನ್ನು ಹೆಚ್ಚಿಗೆ ಪಡೆಯಬಹುದು ಎಂದು ಸಲಹೆ ನೀಡಿದರು.

ವಿಜ್ಞಾನಿಗಳಾದ ಡಾ.ಅರುಣ ಕುಮಾರ್ ಹೊಸಮನಿ, ಡಾ.ವೈ.ಅಮರೇಶ್, ಡಾ.ಎಮ್.ಭೀಮಣ್ಣ, ಡಾ.ಮಹದೇವ ಸ್ವಾಮಿ, ಡಾ.ಎಂ.ವಿ.ರವಿ, ಅಧಿಕಾರಿಗಳಾದ ನಾಗರಾಜ್ ನಾಯ್ಕ, ಲಕ್ಷ್ಮಣ ಮೂರ್ತಿ, ಡಾ.ಲಕ್ಷ್ಮಣ್ ಅವರು ಮಾತನಾಡಿದರು. ಡಾ.ಜಿ.ವೈ.ಲೊಕೇಶ್ ನಿರೂಪಿಸಿ ದರು. ಜಿಲ್ಲೆಯ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

* * 

ರೈತರು ವಿಜ್ಞಾನಿಗಳ ಸಲಹೆ ಮೇರೆಗೆ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸು ವುದರಿಂದ ವಿವಿಧ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು
ಡಾ.ಎಸ್.ಕೆ.ಮೇಟಿ ವಿಸ್ತರಣಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT