ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ– ಧರ್ಮ ನೋಡಿ ಮತ ಹಾಕಬೇಡಿ!

Last Updated 23 ಜನವರಿ 2018, 7:03 IST
ಅಕ್ಷರ ಗಾತ್ರ

ಉಡುಪಿ: ‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಇದು ಯಶಸ್ವಿಯಾಗಬೇಕಾದರೆ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಜಾತಿ, ಧರ್ಮ ನೋಡಿ ಮತ ಹಾಕಬಾರದು’ ಎಂಬ ಕಾಳಜಿಯ ಮಾತುಗಳು ಉಡುಪಿಯ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ‘ಪ್ರಜಾವಾಣಿ’ ಸೋಮವಾರ ಏರ್ಪಡಿಸಿದ್ದ ‘ವೋಟ್ ಮಾಡೋಣ ಬನ್ನಿ’ ಯುವ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮತ್ತು ಪ್ರಾಧ್ಯಾಪಕರಿಂದ ಕೇಳಿಬಂತು.

ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅವರು ‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ರಾಜಕೀಯ, ದೇಶದ ಸಂವಿಧಾನ’ ವಿಷಯದ ಕುರಿತು ಉಪನ್ಯಾಸ ನೀಡಿ, ‘ದೇಶದಲ್ಲಿ ಒಟ್ಟು 84 ಕೋಟಿ ಮತದಾರರಿದ್ದು, ಇದೊಂದು ಅರ್ಥಪೂರ್ಣ ಪ್ರಜಾಪ್ರಭುತ್ವವಾಗಿದೆ. ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುವ ವ್ಯವಸ್ಥೆ ನಮ್ಮದಾಗಿದೆ. ಆದ್ದರಿಂದ 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಚುನಾವಣಾ ಪ್ರತಿಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಈ ವ್ಯವಸ್ಥೆಯನ್ನು ಯಶಸ್ವಿಗೊಳಿಸುವ ಕೈ ಜೋಡಿಸಬೇಕು. ದೇಶದ ಮನಸ್ಥಿತಿಯ ದರ್ಪಣ ಸಂಸತ್ ಅಥವಾ ವಿಧಾನಸಭೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಅಪರಾಧದ ಆರೋಪದ ಮೇಲೆ ಜೈಲು ಸೇರುವ ವ್ಯಕ್ತಿಗೆ ಮತದಾನ ಮಾಡುವ ಅವಕಾಶ ಇಲ್ಲ. ಆದರೆ, ಜೈಲಿನಲ್ಲಿದ್ದು ಪ್ರಕರಣವೊಂದರ ವಿಚಾರಣೆ ಎದುರಿಸುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಬಹುದು. ಇಂತಹ ವೈರುಧ್ಯ ಹಾಗೂ ವ್ಯವಸ್ಥೆಯ ಲೋಪಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಯಮಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

23 ನಿಮಿಷದಲ್ಲಿ 23 ಕಾಯ್ದೆಗಳಿಗೆ ಒಪ್ಪಿಗೆ ನೀಡಲಾಗುತ್ತದೆ ಎಂದರೆ ಪ್ರಭಾಪ್ರಭುತ್ವ ಎಂಬುದು ಎಷ್ಟು ಮೌಲ್ಯ ಕಳೆದುಕೊಂಡಿದೆ ಎಂದು ಅನಿಸುವುದಿಲ್ಲವೇ? ಮತದಾನದ ಹಕ್ಕು ಎಂಬುದು ಸಾಮಾನ್ಯ ಹಕ್ಕಲ್ಲ ಅದು ಬದುಕುವ ಹಕ್ಕಿನ ಹಾಗೆ. ಆದ್ದರಿಂದ ಜನರು ತುಂಬಾ ಕಾಳಜಿ ಹಾಗೂ ಎಚ್ಚರಿಕೆಯಿಂದ ಮತದಾನ ಮಾಡಬೇಕು. ಒಳ್ಳೆಯ ಸರ್ಕಾರ ಬಂದರೆ ಪ್ರಜೆಗಳಿಗೆ ಕೆಲಸ ನೀಡುತ್ತದೆ, ಹತ್ತಾರು ಒಳ್ಳೆಯ ಕೆಲಸ ಮಾಡುವ ಮೂಲಕ ದೇಶದ ಪ್ರಗತಿಗೆ ಶ್ರಮಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದೇ ಉದ್ದೇಶದಿಂದ ಅಂದು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್‌. ಶೇಷನ್ ಅವರು ಹಲವಾರು ಸುಧಾರಣೆಗಳನ್ನು ತಂದರು. ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿಯನ್ನು ಸಹ ಪರಿಚಯಿಸಿದರು ಎಂದು ಹೇಳಿದರು.

ಮೊದಲು ಮತದಾನಕ್ಕೆ ಅರ್ಹತೆ ಪಡೆಯುವ ವಯಸ್ಸು 21 ಇತ್ತು. ಆದರೆ, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1989ರಲ್ಲಿ ಸಂವಿಧಾನಕ್ಕೆ 61ನೇ ತಿದ್ದುಪಡಿ ತಂದು ಮತದಾನದ ವಯೋಮಿತಿಯನ್ನು 18ಕ್ಕೆ ಇಳಿಸಿದರು. ಅಂದರೆ, ತರುಣರು ಪ್ರಬುದ್ಧರಾಗಿರುತ್ತಾರೆ ಎಂಬುದು ಅವರ ನಂಬಿಕೆಯಾಗಿತ್ತು. ನೀವು ಸಹ ಆ ಹಕ್ಕನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದರು. ಮತದಾನದ ಬಗ್ಗೆ ಆಲಸ್ಯ ಸಲ್ಲದು

ಯಾವ ಸರ್ಕಾರ ಬಂದರೂ ಈ ವ್ಯವಸ್ಥೆ ಸುಧಾರಣೆಯಾಗದು, ಆದ್ದರಿಂದ ಮತದಾನದಿಂದ ಯಾವುದೇ ಪ್ರಯೋಜನ ಇಲ್ಲ. ಅಷ್ಟಕ್ಕೂ ನನ್ನ ಒಂದು ಮತದಿಂದ ಏನು ಮಹಾ ಬದಲಾವಣೆ ಆಗುತ್ತದೆ ಎಂಬ ಆಲಸ್ಯವನ್ನು ಮೊದಲು ಬಿಡಬೇಕು. ಸಂವಿಧಾನಬದ್ಧವಾಗಿ ಬಂದಿರುವ ಹಕ್ಕು ಇದಾಗಿದೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ನಂಬಿಯಾರ್ ಹೇಳಿದರು.

ಸುಶಿಕ್ಷಿತರೇ ಇಂದು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವುದನ್ನು ಕಾಣಬಹುದು. ಆದರೆ, ಇದೇ ಹಕ್ಕಿಗಾಗಿ ಹಲವಾರು ದೇಶಗಳಲ್ಲಿ ದೊಡ್ಡ ಪ್ರಮಾಣದ ಹೋರಾಟಗಳಾಗಿವೆ. ಮಹಿಳೆಯರನ್ನು ಮತದಾನದಿಂದ ದೂರ ಇಟ್ಟ ದೇಶಗಳಲ್ಲಿಯೂ ಹಕ್ಕಿಗಾಗಿ ಬೀದಿಗಿಳಿದಿದ್ದನ್ನು ನೋಡಬಹುದು. ಇಷ್ಟೊಂದು ಮಹತ್ವ ಇರುವ ಮತದಾನದ ಬಗ್ಗೆ ತಾತ್ಸಾರ ಬೇಡ. ಮತದಾನ ಮಾಡಬೇಕು ಎಂಬ ನಿಮ್ಮ ತೀರ್ಮಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.

ಜಾತಿ, ಧರ್ಮ, ವರ್ಗವನ್ನು ಪರಿಗಣಿಸದೆ ಒಳ್ಳೆಯ ವ್ಯಕ್ತಿಗಳನ್ನು ಆರಿಸಿಕೊಳ್ಳಿ. ರಾಜ್ಯದ ಚುನಾವಣೆ ಹತ್ತಿರದಲ್ಲೇ ಇರುವ ಸಂದರ್ಭದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶ್ನೆ, ಬಾಣ, ಸಂವಾದ...

ಸುಮಾರು 18 ನಿಮಿಷದ ಸುದೀರ್ಘ ಉಪನ್ಯಾಸ ಕೇಳಿದ ವಿದ್ಯಾರ್ಥಿಗಳು, ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳದೆ,
ಪ್ರಶ್ನೆಗಳ ಬಾಣ ಬಿಟ್ಟು ಕಾರ್ಯಕ್ರಮವನ್ನು ರಂಗೇರಿಸಿದರು. ಅವರ ವಿಚಾರವಂತಿಕೆಯ ಒರತೆ ಮಾಧ್ಯಮ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿತು.

ಪತ್ರಿಕೋದ್ಯಮ ವಿಭಾಗದ ಜಸ್ಟಿನ್ ಎರೋಲ್ ಡಿಸಿಲ್ವ ಮಾತನಾಡಿ, ಸಿದ್ಧಾಂತಗಳಿಗೆ ಮತದಾರ ಕಟ್ಟುಬಿದ್ದರೆ ನಿಜವಾದ ಬದಲಾವಣೆ ಸಾಧ್ಯವಾಗಲು ಹೇಗೆ ಸಾಧ್ಯ ಎಂದು ಗಂಭೀರ ಪ್ರಶ್ನೆ ಕೇಳಿದರು.

ನೋಟಾ (ಅಭ್ಯರ್ಥಿ ಪಟ್ಟಿಯಲ್ಲಿರುವ ಯಾರೂ ಅಲ್ಲ) ಬಗ್ಗೆ ಇನ್ನೂ ಜಾಗೃತಿ ಮೂಡದಿರುವ ಬಗ್ಗೆ ವಿದ್ಯಾರ್ಥಿನಿ ಶಾಂತಿ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮಗಳು ಏಕೆ ನೋಟಾದ ಬಗ್ಗೆ ಪ್ರಚಾರ ನೀಡುತ್ತಿಲ್ಲ ಎಂದರು.

ರಾಜಕಾರಣಿಯೊಬ್ಬನ ಚಾರಿತ್ಯ್ರವನ್ನು ಗಮನಿಸಬೇಕೇ ಬೇಡವೇ. ಒಳ್ಳೆಯ ಕೆಲಸ ಮಾಡುವ ವ್ಯಕ್ತಿಯ ಚಾರಿತ್ರ್ಯ ಸರಿ ಇಲ್ಲದ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಳ್ಳಬಹುದು ಎಂದು ನವೀನ್ ಕೇಳಿದರು.

ಪತ್ರಿಕೆಗಳು ಒಂದು ಪಕ್ಷ– ವ್ಯಕ್ತಿಯ ಪರವಾಗಿ ಬರೆದು ಜನರನ್ನು ದಾರಿ ತಪ್ಪಿಸುವುದು ಎಷ್ಟು ಸರಿ ಎಂದು ದರ್ಶನ್ ನೇರವಾಗಿ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದರು. ಭ್ರಷ್ಟನನ್ನು ಸಹ ಒಳ್ಳೆಯ ವ್ಯಕ್ತಿ ಎಂದು ಬರೆಯುವ ಕೆಲವು ಮಾಧ್ಯಮಗಳು ಮತದಾರರ ದಾರಿ ತಪ್ಪಿಸುತ್ತಿವೆ ಎಂಬ ಗಂಭೀರ ಆರೋಪವನ್ನು ಮಾಧವ ಮಾಡಿದರು. ದಿವ್ಯ, ಸುಹಾನ್, ಶ್ವೇತ ಅವರೂ ಪ್ರಶ್ನೆ ಮಾಡಿದರು.

ಒಂದೊಂದೇ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಂದ್ರನಾಥ ಶೆಟ್ಟಿ ಅವರು, ಧರ್ಮ, ಜಾತಿಗೆ ಕಟ್ಟುಬಿದ್ದಾಗ ನಿಷ್ಪಕ್ಷಪಾತ ಕ್ರಮ ನಿರೀಕ್ಷಿಸಲು ಸಾಧ್ಯವಿಲ್ಲ. ನೋಟಾದ ಬಗ್ಗೆ ಚುನಾವಣಾ ಆಯೋಗವೇ ಇನ್ನಷ್ಟು ಜಾಗೃತಿ ಮೂಡಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ನೈತಿಕತೆ ಎಂಬುದು ಬಹಳ ಮುಖ್ಯ ಎಂದರು. ಮಾಧ್ಯಮಗಳು ಏನೇ ಹೇಳಲಿ ನೀವು ಸಹ ಅದರಲ್ಲಿ ಸರಿ– ತಪ್ಪುಗಳು ಯಾವುವು ಎಂದು ಅರಿಯುವ, ನಿರ್ಧರಿಸುವಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಸುಚೇತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಮತದಾನದ ಬಗ್ಗೆ ಆಲಸ್ಯ ಸಲ್ಲದು

ಯಾವ ಸರ್ಕಾರ ಬಂದರೂ ಈ ವ್ಯವಸ್ಥೆ ಸುಧಾರಣೆಯಾಗದು, ಆದ್ದರಿಂದ ಮತದಾನದಿಂದ ಯಾವುದೇ ಪ್ರಯೋಜನ ಇಲ್ಲ. ಅಷ್ಟಕ್ಕೂ ನನ್ನ ಒಂದು ಮತದಿಂದ ಏನು ಮಹಾ ಬದಲಾವಣೆ ಆಗುತ್ತದೆ ಎಂಬ ಆಲಸ್ಯವನ್ನು ಮೊದಲು ಬಿಡಬೇಕು. ಸಂವಿಧಾನಬದ್ಧವಾಗಿ ಬಂದಿರುವ ಹಕ್ಕು ಇದಾಗಿದೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ನಂಬಿಯಾರ್ ಹೇಳಿದರು.

ಸುಶಿಕ್ಷಿತರೇ ಇಂದು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವುದನ್ನು ಕಾಣಬಹುದು. ಆದರೆ, ಇದೇ ಹಕ್ಕಿಗಾಗಿ ಹಲವಾರು ದೇಶಗಳಲ್ಲಿ ದೊಡ್ಡ ಪ್ರಮಾಣದ ಹೋರಾಟಗಳಾಗಿವೆ. ಮಹಿಳೆಯರನ್ನು ಮತದಾನದಿಂದ ದೂರ ಇಟ್ಟ ದೇಶಗಳಲ್ಲಿಯೂ ಹಕ್ಕಿಗಾಗಿ ಬೀದಿಗಿಳಿದಿದ್ದನ್ನು ನೋಡಬಹುದು. ಇಷ್ಟೊಂದು ಮಹತ್ವ ಇರುವ ಮತದಾನದ ಬಗ್ಗೆ ತಾತ್ಸಾರ ಬೇಡ. ಮತದಾನ ಮಾಡಬೇಕು ಎಂಬ ನಿಮ್ಮ ತೀರ್ಮಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.

ಜಾತಿ, ಧರ್ಮ, ವರ್ಗವನ್ನು ಪರಿಗಣಿಸದೆ ಒಳ್ಳೆಯ ವ್ಯಕ್ತಿಗಳನ್ನು ಆರಿಸಿಕೊಳ್ಳಿ. ರಾಜ್ಯದ ಚುನಾವಣೆ ಹತ್ತಿರದಲ್ಲೇ ಇರುವ ಸಂದರ್ಭದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶ್ನೆ, ಬಾಣ, ಸಂವಾದ...

ಸುಮಾರು 18 ನಿಮಿಷದ ಸುದೀರ್ಘ ಉಪನ್ಯಾಸ ಕೇಳಿದ ವಿದ್ಯಾರ್ಥಿಗಳು, ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳದೆ, ಪ್ರಶ್ನೆಗಳ ಬಾಣ ಬಿಟ್ಟು ಕಾರ್ಯಕ್ರಮವನ್ನು ರಂಗೇರಿಸಿದರು. ಅವರ ವಿಚಾರವಂತಿಕೆಯ ಒರತೆ ಮಾಧ್ಯಮ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿತು.

ಪತ್ರಿಕೋದ್ಯಮ ವಿಭಾಗದ ಜಸ್ಟಿನ್ ಎರೋಲ್ ಡಿಸಿಲ್ವ ಮಾತನಾಡಿ, ಸಿದ್ಧಾಂತಗಳಿಗೆ ಮತದಾರ ಕಟ್ಟುಬಿದ್ದರೆ ನಿಜವಾದ ಬದಲಾವಣೆ ಸಾಧ್ಯವಾಗಲು ಹೇಗೆ ಸಾಧ್ಯ ಎಂದು ಗಂಭೀರ ಪ್ರಶ್ನೆ ಕೇಳಿದರು.

ನೋಟಾ (ಅಭ್ಯರ್ಥಿ ಪಟ್ಟಿಯಲ್ಲಿರುವ ಯಾರೂ ಅಲ್ಲ) ಬಗ್ಗೆ ಇನ್ನೂ ಜಾಗೃತಿ ಮೂಡದಿರುವ ಬಗ್ಗೆ ವಿದ್ಯಾರ್ಥಿನಿ ಶಾಂತಿ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮಗಳು ಏಕೆ ನೋಟಾದ ಬಗ್ಗೆ ಪ್ರಚಾರ ನೀಡುತ್ತಿಲ್ಲ ಎಂದರು.

ರಾಜಕಾರಣಿಯೊಬ್ಬನ ಚಾರಿತ್ಯ್ರವನ್ನು ಗಮನಿಸಬೇಕೇ ಬೇಡವೇ. ಒಳ್ಳೆಯ ಕೆಲಸ ಮಾಡುವ ವ್ಯಕ್ತಿಯ ಚಾರಿತ್ರ್ಯ ಸರಿ ಇಲ್ಲದ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಳ್ಳಬಹುದು ಎಂದು ನವೀನ್ ಕೇಳಿದರು.

ಪತ್ರಿಕೆಗಳು ಒಂದು ಪಕ್ಷ– ವ್ಯಕ್ತಿಯ ಪರವಾಗಿ ಬರೆದು ಜನರನ್ನು ದಾರಿ ತಪ್ಪಿಸುವುದು ಎಷ್ಟು ಸರಿ ಎಂದು ದರ್ಶನ್ ನೇರವಾಗಿ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದರು. ಭ್ರಷ್ಟನನ್ನು ಸಹ ಒಳ್ಳೆಯ ವ್ಯಕ್ತಿ ಎಂದು ಬರೆಯುವ ಕೆಲವು ಮಾಧ್ಯಮಗಳು ಮತದಾರರ ದಾರಿ ತಪ್ಪಿಸುತ್ತಿವೆ ಎಂಬ ಗಂಭೀರ ಆರೋಪವನ್ನು ಮಾಧವ ಮಾಡಿದರು. ದಿವ್ಯ, ಸುಹಾನ್, ಶ್ವೇತ ಅವರೂ ಪ್ರಶ್ನೆ ಮಾಡಿದರು.

ಒಂದೊಂದೇ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಂದ್ರನಾಥ ಶೆಟ್ಟಿ ಅವರು, ಧರ್ಮ, ಜಾತಿಗೆ ಕಟ್ಟುಬಿದ್ದಾಗ ನಿಷ್ಪಕ್ಷಪಾತ ಕ್ರಮ ನಿರೀಕ್ಷಿಸಲು ಸಾಧ್ಯವಿಲ್ಲ. ನೋಟಾದ ಬಗ್ಗೆ ಚುನಾವಣಾ ಆಯೋಗವೇ ಇನ್ನಷ್ಟು ಜಾಗೃತಿ ಮೂಡಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ನೈತಿಕತೆ ಎಂಬುದು ಬಹಳ ಮುಖ್ಯ ಎಂದರು. ಮಾಧ್ಯಮಗಳು ಏನೇ ಹೇಳಲಿ ನೀವು ಸಹ ಅದರಲ್ಲಿ ಸರಿ– ತಪ್ಪುಗಳು ಯಾವುವು ಎಂದು ಅರಿಯುವ, ನಿರ್ಧರಿಸುವ ಶಕ್ತಿ ಬೆಳೆಸಿಕೊಳ್ಳಿ ಎಂದರು.

* * 

ಯಾವುದೇ ಒಂದು ಸಿದ್ಧಾಂತ ಅಥವಾ ವ್ಯಕ್ತಿಗೆ ಕಟ್ಟುಬಿದ್ದು ಕಮಿಟೆಡ್‌ (ಒಂದು ಪಕ್ಷಕ್ಕೆ ಬದ್ಧತೆ) ಮತದಾರರಾಗಬೇಡಿ. ಎಲ್ಲವನ್ನೂ ಆಳೆದು ತೂಗಿ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಪ್ಲೋಟಿಂಗ್ (ಒಳ್ಳೆಯದರ ಕಡೆ ಸಾಗುವ) ಮತದಾರಾಗಿ.
ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT