ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ತಾಲ್ಲೂಕು ಸಾಕಾರಗೊಂಡ ಆಶಯ

Last Updated 23 ಜನವರಿ 2018, 7:12 IST
ಅಕ್ಷರ ಗಾತ್ರ

ದೇವರ ಹಿಪ್ಪರಗಿ: ತಾಲ್ಲೂಕು ಹೋರಾಟ ಸಮಿತಿ ಹಾಗೂ ಸುತ್ತಮುತ್ತ ಗ್ರಾಮಗಳ ನಾಗರಿಕರ ಎರಡು ದಶಕಗಳ ತಾಲ್ಲೂಕು ಹೋರಾಟಕ್ಕೆ ಕೊನೆಗೂ ಜಯ ಸಂದಿದ್ದು, ಅಧಿಕೃತ ಘೋಷಣೆಗಾಗಿ ದಿನಗಣನೆ ಆರಂಭಗೊಂಡಿದ್ದು ಪಟ್ಟಣದ ಜನತೆ ಕಾತರದಿಂದ ಕಾಯುವಂತಾಗಿದೆ.

ಮಡಿವಾಳ ಮಾಚಿದೇವ, ಮೊಹರೆ ಹಣಮಂತ್ರಾಯರ ಜನ್ಮಭೂಮಿಯಾಗಿ ಹಲವು ವಿಶೇಷಗಳಿಂದ ಕೂಡಿದ ದೇವರ ಹಿಪ್ಪರಗಿ ಪಟ್ಟಣ ಬಹುತೇಕ ಜನವರಿ ತಿಂಗಳಿನಿಂದ ತಾಲ್ಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡ ಲಿದ್ದು, ಇದಕ್ಕಾಗಿ ತಹಶೀಲ್ದಾರ್ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳಿಗಾಗಿ ಸ್ಥಳ ಪರಿಶೀಲನೆ ನಡೆದಿದೆ.

ಈ ಬಗ್ಗೆ ಸಿಂದಗಿ ತಹಶೀಲ್ದಾರ ವಿರೇಶ ಬಿರಾದಾರ ಮಾತನಾಡಿ, ಸರ್ಕಾರ ಆದೇಶ ನೀಡಿದ ತಕ್ಷಣದಿಂದ ಎಲ್ಲ ಕಚೇರಿ ಆರಂಭಗೊಳ್ಳಲಿವೆ. ಅದಕ್ಕಾಗಿ ಲಭ್ಯವಿರುವ ಕಟ್ಟಡ ಗುರುತಿಸಲಾಗಿದೆ. ಜೊತೆಗೆ ಹೊಸ ಕಟ್ಟಡಗಳಿಗೆ ಸ್ಥಳ ಪರಿಶೀಲನೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬಾಬುಗೌಡ ಪಾಟೀಲ ಹಾಗೂ ಕಾರ್ಯದರ್ಶಿ ಡಾ.ಆರ್.ಆರ್. ನಾಯಿಕ ಮಾತನಾಡಿ, ತಾಲೂಕು ರಚನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಮುಖ್ಯಮಂತ್ರಿ ಸಿದ್ರಾಮಯ್ಯ, ಕಂದಾಯ ಸಚಿವ ಕಾಗೋಡ ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪ್ರಯತ್ನ ಸ್ವಾಗತಾರ್ಹ ಎಂದು ಶ್ಲಾಘಿಸಿದರು.

ದೇವರಹಿಪ್ಪರಗಿ ತಾಲ್ಲೂಕು ವ್ಯಾಪ್ತಿಗೆ ಈಗಿರುವ ಗ್ರಾಮಗಳ ಜೊತೆ ಅತೀ ಸಮೀಪದ ಬೈರವಾಡಗಿ, ಸಾತಿ ಹಾಳ, ಮಾರ್ಕಬ್ಬಿನಹಳ್ಳಿ, ಯಾಳವಾರ, ನಾಗರಾಳ ಗ್ರಾಮಗಳನ್ನು ಸೇರ್ಪಡೆ ಮಾಡಿದ್ದರೆ ಇನ್ನೂ ಉತ್ತಮವಾಗುತ್ತಿತ್ತು, ಈಗ ಅವುಗಳನ್ನು ಕೈಬಿಟ್ಟಿರುವುದು ಅಲ್ಲಿನ ಜನತೆಯ ಅಸಮಾಧಾನಕ್ಕೆ ಕಾರಣವಾಗಬಹುದು ಎಂದರು.

ಈ ಕಾರ್ಯಕ್ಕೆ ಪಟ್ಟಣದ ಜನತೆ ಸಹಕಾರವಿದ್ದು ಆದಷ್ಟು ಶೀಘ್ರವಾಗಿ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ಪಂಚಾಯ್ತಿ, ನ್ಯಾಯಾಲಯ ಸೇರಿದಂತೆ ಎಲ್ಲ ಪ್ರಮುಖ ತಾತ್ಕಾಲಿಕ ಕಚೇರಿಗಳನ್ನು ಶಾಶ್ವತ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಹಾಗೆಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಟಿಐ ಕಾಲೇಜು ಕಟ್ಟಡಗಳು, ಬಸ್ ನಿಲ್ದಾಣದ ನವೀಕರಣ ಕೈ ಗೊಂಡು ಮಾದರಿ ತಾಲ್ಲೂಕು ಕೇಂದ್ರವಾಗಿ ರೂಪಿಸಬೇಕು ಎಂದು ಆಗ್ರಹಿಸಿದರು.

ಅಮರನಾಥ ಹಿರೇಮಠ

ದೇವರಹಿಪ್ಪರಗಿ ತಾಲ್ಲೂಕಿಗೆ ಸೇರ್ಪಡೆಯಾಗುವ ಗ್ರಾಮಗಳು

ದೇವರ ಹಿಪ್ಪರಗಿ ನೂತನ ತಾಲ್ಲೂಕು ದೇವರಹಿಪ್ಪರಗಿ, ಪಡಗಾನೂರ, ದೇವೂರ, ಮುಳಸಾವಳಗಿ, ನಿವಾಳಖೇಡ, ಹರನಾಳ, ಇಂಗಳಗಿ ,ಚಿಕ್ಕರೂಗಿ ಹಿಟ್ಟಿನಹಳ್ಳಿ, ಗಂಗನಳ್ಳಿ ಜಾಲವಾದ, ಮಣೂರ, ಬೂದಿಹಾಳ ಡೋಣ, ಕೋರವಾರ, ವರ್ಕಾನಳ್ಳಿ ,ಹಂಚಲಿ , ಯಲಗೋಡ, ಕೆರೂಟಗಿ , ಕುದರಗೊಂಡ, ಕೊಂಡಗೂಳಿ, ಬಿ.ಬಿ. ಇಂಗಳಗಿ , ನಾಗರಾಳ ಡೋಣ, ಕಲಕೇರಿ, ರಾಂಪೂರ ಪಿ.ಟಿ, ತಿಳಗೂಳ, ಹುಣಶ್ಯಾಳ, ಅಸ್ಕಿ, ನೀರಲಗಿ, ಜಲಪುರ, ಬಿಂಜಲಭಾವಿ, ಕೆಸರಟ್ಟಿ, ಅಂಬಳನೂರ, ಬೆಕಿನಾಳ , ಬನಹಟ್ಟಿ ಪಿಟಿ, ವಣಕಿಹಾಳ, ಬೂದಿಹಾಳ ಪಿಟಿ, ತುರಕನಗೇರಿ, ಚಟ್ನಳ್ಳಿ, ಹಾಳ ಗುಂಡಕನಾಳ, ಅಸಂತಾಪೂರ, ಆಲಗೂರ, ವಂದಾಲ, ಕದರಾಪೂರ, ಸಲಾದಹಳ್ಳಿ, ಆನೆಮಡು, ಬೊಮ್ಮನಜೋಗಿ, ಇಬ್ರಾಹಿಂಪೂರ, ಕಡ್ಲೇವಾಡ ಪಿಸಿಎಚ್ ಸೇರಿ ಒಟ್ಟು 48 ಗ್ರಾಮಗಳನ್ನು ಹೊಂದಿದೆ.

* * 

ದೇವರಹಿಪ್ಪರಗಿ ತಾಲ್ಲೂಕು ವ್ಯಾಪ್ತಿಗೆ ಈಗಿರುವ 48 ಗ್ರಾಮಗಳ ಜೊತೆ ಅತಿ ಸಮೀಪದ ಗ್ರಾಮಗಳನ್ನು ಸೇರ್ಪಡೆ ಮಾಡಿದ್ದರೆ ಸಂತೋಷವಾಗುತ್ತಿತ್ತು
ಬಾಬುಗೌಡ ಪಾಟೀಲ, ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT