ಮಿನಿವಿಧಾನಸೌಧ ಉದ್ಘಾಟನೆ ನಾಳೆ

7

ಮಿನಿವಿಧಾನಸೌಧ ಉದ್ಘಾಟನೆ ನಾಳೆ

Published:
Updated:

ಜಮಖಂಡಿ: ನಗರದಲ್ಲಿ ನಿರ್ಮಿಸಲಾಗಿರುವ ಸಂಸತ್‌ ಭವನ ಮಾದರಿಯ ಮಿನಿವಿಧಾನಸೌಧ ಕಟ್ಟಡದ ಉದ್ಘಾಟನಾ ಸಮಾರಂಭ ಜ.24 ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ ಎಂದು ಕಾಂಗ್ರೆಸ್‌ ಯುವ ಧುರೀಣ ಆನಂದ ನ್ಯಾಮಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ವಸತಿ ಸಚಿವ ಕೃಷ್ಣಪ್ಪ ಉದ್ಘಾಟನಾ ಸಮಾರಂಭಕ್ಕೆ ಬರಲಿದ್ದಾರೆ.. 4 ಎಕರೆ ಪ್ರದೇಶದಲ್ಲಿ 1 ಲಕ್ಷ ಚದರ ಅಡಿ ವಿಸ್ತಾರವುಳ್ಳ ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿಯನ್ನು ಜೈಪುರ ಕಲ್ಲಿನಿಂದ ಅಂದಾಜು ₹15 ಕೋಟಿ ವೆಚ್ಚದಲ್ಲಿ ಕೇವಲ 11 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲಾಗಿದೆ.

ಮಿನಿವಿಧಾನಸೌಧ ಕಟ್ಟಡದಲ್ಲಿ ಸಭಾಂಗಣ, ಶಾಸಕರ ಕಚೇರಿ, ಎಸಿ ಕಚೆರಿ, ತಹಶೀಲ್ದಾರ್‌ ಕಚೇರಿ, ಬಾಂಡ್‌ ರೈಟರ್‌ ಕೊಠಡಿಗಳು, ಅಂಗಡಿ ಮುಂಗಟ್ಟುಗಳು, ಕ್ಯಾಂಟೀನ್‌ ಹಾಗೂ ಕಂದಾಯ ಇಲಾಖೆಯ ಕೋರ್ಟ್‌ ಹಾಲ್‌ಗಳ ಸೌಲಭ್ಯ ಒದಗಿಸಲಾಗಿದೆ ಎಂದರು.

ಸಾವಳಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಜಮಖಂಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಈಶ್ವರ ಕರಬಸನವರ, ಈಶ್ವರ ವಾಳೆನ್ನವರ, ರವಿ ಯಡಹಳ್ಳಿ, ಮುಬಾರಕ ಸಾರವಾನ, ಬಸವರಾಜ ಹರಕಂಗಿ, ಮಲ್ಲು ಗಣಾಚಾರಿ, ಪ್ರಕಾಶ ಕಣಬೂರ, ಸಿದ್ದು ಮೀಶಿ, ಸಾಧಿಕ ಬಂಟನೂರ, ಭೀಮು ಕಮರಡಗಿ, ಸುರೇಖಾ ನಾಡಗೇರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry