ಚಿರತೆ ದಾಳಿ: ಹೋರಿ ಕರು ಸಾವು

7

ಚಿರತೆ ದಾಳಿ: ಹೋರಿ ಕರು ಸಾವು

Published:
Updated:

ಹಾವಿನ ಮಡಗು (ಸಂಡೂರು): ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಚಿರತೆಯೊಂದು ಶೇಖಣ್ಣ ಎಂಬುವವರ ಮನೆಯ ಹಿಂಬಾಗದಲ್ಲಿದ್ದ ಹೋರಿ ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ನಸಗುಗತ್ತಲಾಗುವ ಮುನ್ನವೇ ಈ ಘಟನೆ ನಡೆದಿದ್ದು, ಸುತ್ತಲಿನ ಜನರು ಗಲಾಟೆ ಮಾಡಿ ಚಿರತೆಯನ್ನು ಓಡಿಸಿದರೂ ಕರು ಬದುಕುಳಿಯಲಿಲ್ಲ. ವಾರದ ಹಿಂದೆ ಇದೇ ಶೇಖಣ್ಣನವರ ಒಂದು ಆಕಳನ್ನು ಚಿರತೆ ಕೊಂದುಹಾಕಿತ್ತು.

ಕೆಲ ದಿನಗಳ ಹಿಂದೆ ಗ್ರಾಮದ ಎಂ. ಚಂದ್ರಪ್ಪ ಎಂಬುವವರ 2 ಕುರಿಗಳನ್ನು ಚಿರತೆ ಕೊಂದು ತಿಂದಿತ್ತು ಎಂದು ವಿಠಲಾಪುರ ಗ್ರಾಮದ ಎಪಿಎಂಸಿ ಸದಸ್ಯ ಸದಾಶಿವ ತಿಳಿಸಿದರು.

ಕೆರೆಯೇ ಕಾರಣ:‌ ಗ್ರಾಮಕ್ಕೆ ಅಂಟಿಕೊಂಡಿರುವ ವಿಠಲಾಪುರ–ಹಾವಿನಮಡಗು ಕೆರೆ ಸುಮಾರು 700 ಎಕರೆ ಪ್ರದೇಶವನ್ನು ಹೊಂದಿದ್ದು, ಅಲ್ಲಿ ಮಳೆ ಇಲ್ಲದೆ ಜಾಲಿ ಮುಳ್ಳಿನ ಗಿಡಗಳ ಪೊದೆಗಳು ಹರಡಿವೆ. ಈ ಪೊದೆಗಳಲ್ಲಿ ಚಿರತೆ, ಕರಡಿ, ಹಂದಿ ಮೊದಲಾದ ಕಾಡು ಪ್ರಾಣಿಗಳಿಗೆ ಆಶ್ರಯ ಪಡೆದಿವೆ. ಕೆರೆಯ ಕಡೆಗೆ ಮೇಯಲು ಹೋದ ಅಥವಾ ರೈತರು ತಮ್ಮ ಮನೆಯ ಬಳಿ ಕಟ್ಟಿಹಾಕುವ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

ಕೆರೆ ಅಭಿವೃದ್ಧಿಗೆ ಮನವಿ:  ಕೆರೆಯಲ್ಲಿನ ಮುಳ್ಳುಕಂಟಿಗಳನ್ನು ತೆರವುಗೊಳಿಸಬೇಕು ಎಂದು ಶಾಸಕ ಈ ತುಕಾರಾಂ ಅವರಿಗೆ ಮನವಿ ಸಲ್ಲಿಸಿದ್ದೆವು. ಅವರು ಸಣ್ಣ ನೀರಾವರಿ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ. ಖನಿಜ ನಿಧಿಯಡಿಯಲ್ಲಿ ಕೆರೆಯ ಅಭಿವೃದ್ಧಿಗೆ ₹4.20 ಕೋಟಿಯ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸಿದ್ದಾರೆ. ಇತ್ತೀಚೆಗೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry