ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿರಿಯೂರಿನಲ್ಲಿ ಅಭಿವೃದ್ಧಿಯ ಪರ್ವ’

Last Updated 23 ಜನವರಿ 2018, 10:01 IST
ಅಕ್ಷರ ಗಾತ್ರ

ಹಿರಿಯೂರು: ‘ಎಂದೂ ಕಾಣದ ಅಭಿವೃದ್ಧಿ ಶಾಸಕ ಸುಧಾಕರ ಅವಧಿಯಲ್ಲಿ ಆಗಿದ್ದು,  ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತಕೊಡಿ ಎಂದು ಕೇಳಲು ಯಾವ ಹಿಂಜರಿಕೆಯೂ ಬೇಡ’ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಹೇಳಿದರು.

ನಗರದ ಪ್ರಕಾಶ್ ಜೈನ್ ಮಿಲ್ ಆವರಣದಲ್ಲಿ ಭಾನುವಾರ ನಗರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವರಕೊಟ್ಟ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಸಮುಚ್ಯ, ಐಮಂಗಲ ಗ್ರಾಮದಲ್ಲಿ ಕಿತ್ತೂರು ಚನ್ನಮ್ಮ ವಸತಿ ಶಾಲೆ, ಜವನಗೊಂಡನಹಳ್ಳಿ, ಯಲ್ಲದಕೆರೆ ಗ್ರಾಮಗಳಿಗೆ ಮೊರಾರ್ಜಿ ವಸತಿ ಶಾಲೆಗಳು, ನಗರದಲ್ಲಿ ಐಟಿಐ ಕಾಲೇಜು, ಬಾಲಕಿಯರಿಗೆ ಪ್ರತ್ಯೇಕ ಸರ್ಕಾರಿ ಪಿಯು ಕಾಲೇಜು, ಬಬ್ಬೂರು ಸಮೀಪ ತೋಟಗಾರಿಕೆ ಮಹಾ ವಿದ್ಯಾಲಯ, ನೂರಾರು ಶಾಲಾ ಕಟ್ಟಡಗಳು, ಹಿರಿಯೂರು ನಗರಕ್ಕೆ ವಿ.ವಿ ಜಲಾಶಯದಿಂದ ಕೊಳವೆ ಮಾರ್ಗದ ಮೂಲಕ ಕುಡಿಯುವ ನೀರು ಪೂರೈಕೆಯಂಥ ಅಭಿವೃದ್ಧಿ ಕಾರ್ಯಗಳು ಶಾಸಕರಿಂದ ಆಗಿವೆ ಎಂದು   ತಿಳಿಸಿದರು.

ಪಕ್ಷದ ಮುಖಂಡ ಅಜಯ್ ಕುಮಾರ್ ಮಾತನಾಡಿ, ಜವನ ಗೊಂಡನಹಳ್ಳಿ ಹೋಬಳಿಯ 45 ಹಳ್ಳಿಗಳಿಗೆ ಗಾಯತ್ರಿ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಹಾಗೂ ಐಮಂಗಲ ಹೋಬಳಿಯ 74 ಹಳ್ಳಿಗಳಿಗೆ ವಿ.ವಿ ಜಲಾಶಯದಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಒಂದೆರಡು ತಿಂಗಳಲ್ಲಿ ಮುಗಿಯಲಿವೆ. ಪಕ್ಷದಲ್ಲಿ ಭಿನ್ನಾಭಿಪ್ರಾಯಕ್ಕೆ, ಅಪಸ್ವರದ ಮಾತುಗಳಿಗೆ ಆಸ್ಪದ ಕೊಡದೆ ಸುಧಾಕರ ಅವರ ಗೆಲುವಿಗೆ  ಒಗ್ಗಟ್ಟಿ ನಿಂದ ಶ್ರಮಿಸೋಣ ಎಂದರು.ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಮಾತನಾಡಿದರು. ದಾದಾಪೀರ್, ಇ.ಮಂಜುನಾಥ್, ಸಾದತ್ ವುಲ್ಲಾ, ಪುರುಷೋತ್ತಮ್, ದಲೀಚಂದ್. ವಾಸುದೇವ್, ರವಿಚಂದ್ರನಾಯ್ಕ, ಲಕ್ಷ್ಮೀದೇವಿ, ತಿಪ್ಪಮ್ಮ, ಅಬ್ಬಾಸ್, ಬಿ.ಎನ್. ಪ್ರಕಾಶ್, ಮಹಂತೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT