7

ಮೈಸೂರಿನಲ್ಲಿ ‘ವೆನಿಲ್ಲಾ’ ಪರಿಮಳ

Published:
Updated:
ಮೈಸೂರಿನಲ್ಲಿ ‘ವೆನಿಲ್ಲಾ’ ಪರಿಮಳ

ಜಯತೀರ್ಥ ನಿರ್ದೇಶನದ ‘ವೆನಿಲ್ಲಾ’ ಸಿನಿಮಾದ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು. ಸಿನಿಮಾ ತಂಡಕ್ಕೆ ಶುಭ ಹಾರೈಸಲು ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರು.

‘ಹಿಂದೆ ಬ್ಯೂಟಿಫುಲ್ ಮನಸುಗಳು ಚಿತ್ರದ ಹಾಡುಗಳ ಸಿ.ಡಿ.ಯನ್ನು ದರ್ಶನ್ ಅವರಿಂದಲೇ ಬಿಡುಗಡೆ ಮಾಡಿಸಲಾಗಿತ್ತು. ಅವು ಹಿಟ್ ಆಗಿದ್ದವು. ಹಾಗಾಗಿ, ಈ ಸಿನಿಮಾದ ಹಾಡುಗಳೂ ಹಿಟ್ ಆಗುವ ನಂಬಿಕೆ ಇದೆ’ ಎಂದರು ಜಯತೀರ್ಥ.

ನಾಯಕ ನಟ ಅವಿನಾಶ್ ಬಗ್ಗೆ ಮೆಚ್ಚುಗೆಯ ಮಾತು ಹೇಳಿದ ಜಯತೀರ್ಥ, ‘ಅವಿನಾಶ್ ಅವರು ಮಂಡ್ಯ ರಮೇಶ್ ಶಾಲೆಯಲ್ಲಿ ನಟನೆಯ ತರಬೇತಿ ಪಡೆದು, ಚೆನ್ನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕೊಲೆಯೊಂದರ ಸುತ್ತಲಿನ ನಿಗೂಢದ ಬಗ್ಗೆ ಕಥೆ ಇದೆ. ಐದು ಹಾಡುಗಳು ಇವೆ’ ಎಂದರು.

‘ಈ ತಂಡದ ಜೊತೆ ನಾನು ನಟಿಸಿಲ್ಲ. ಹೀಗಿದ್ದರೂ, ರಂಗಭೂಮಿಗೆ ಸೇರಿದ ತಂಡ ಸಿದ್ಧಪಡಿಸಿದ ಸಿನಿಮಾ ಇದಾಗಿರುವುದು ಖುಷಿ ತಂದಿದೆ. ನೀನಾಸಂನಲ್ಲಿ ತರಬೇತಿ ಪಡೆದ ದರ್ಶನ್ ಇಂದು ಬಹಳ ಎತ್ತರಕ್ಕೆ ಹೋಗಿದ್ದಾರೆ. ಆದರೂ ಅವರಲ್ಲಿ ವಿನಯ ಕಾಣಿಸುತ್ತದೆ’ ಎಂದು ಮೆಚ್ಚುಗೆಯ ಮಾತು ಹೇಳಿದರು ಮಂಡ್ಯ ರಮೇಶ್.

‘ನಾನು ಇದುವರೆಗೆ 50 ಚಿತ್ರಗಳಲ್ಲಿ ನಟಿಸಿದ್ದರೂ, 51ನೇ ಚಿತ್ರಕ್ಕೆ ಹೊಸಬನಾಗಿಯೇ ಕೆಲಸ ಮಾಡುತ್ತೇನೆ’ ಎಂದರು ದರ್ಶನ್. ಈ ಸಿನಿಮಾ ನಿರ್ಮಿಸಿದವರು ಜಯರಾಂ. ಚಿತ್ರವು ಮಾರ್ಚ್‍ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry