ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ

7

ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ

Published:
Updated:
ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ

ಗುರುಗ್ರಾಮ: ಪತಿಯ ಎದುರಿಗೆ 22 ವರ್ಷದ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ನಾಲ್ವರನ್ನು ಇಲ್ಲಿನ ಜೊಹ್ಲಾಕ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಯುವತಿ ಮೇಲೆ ಭಾನುವಾರ ರಾತ್ರಿ ಅತ್ಯಾಚಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿಯು ತಮ್ಮ ಕುಟುಂಬದ ಕಾರ್ಯಕ್ರಮವನ್ನು ಮುಗಿಸಿಕೊಂಡು ಅಳಿಯ ಹಾಗೂ ಪತಿಯ  ಜತೆ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಗುರುಗ್ರಾಮ ಬಳಿಯ ಬಿಸಿನೆಸ್ ಪಾರ್ಕ್ ಟವರ್ ಬಳಿ ಕಾರು ನಿಲ್ಲಿಸಿ ಕೆಳಗೆ ಇಳಿದು ಹೋಗಿದ್ದ ಗಂಡನಿಗಾಗಿ ಯುವತಿಯು ಅಳಿಯನ ಜತೆ ಕಾಯುತ್ತಿದ್ದಳು. ಆಗ ಬಂದ ನಾಲ್ವರು ಕಾರನ್ನು ನಿಲ್ಲಿಸಿರುವ ಬಗ್ಗೆ ಪ್ರಶ್ನಿಸಿದ್ದಾರೆ. ನಂತರ ಯುವತಿಯನ್ನು ಕಾರಿನಿಂದ ಎಳೆದು ಅತ್ಯಾಚಾರ ನಡೆಸಿದ್ದಾರೆ ಎಂದು ಗುರುಗ್ರಾಮದ ಎಸಿಪಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry