ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಅಧಿಕೃತ ಸಂವಹನದಲ್ಲಿ ‘ದಲಿತ’ ಪದ ಬಳಸುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್

Last Updated 23 ಜನವರಿ 2018, 14:23 IST
ಅಕ್ಷರ ಗಾತ್ರ

ಭೋಪಾಲ್:  ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಮ್ಮ ಅಧಿಕೃತ ಸಂವಹನದಲ್ಲಿ ದಲಿತ ಪದವನ್ನು ಉಪಯೋಗಿಸಬಾರದು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.

ಗ್ವಾಲಿಯರ್ ನ್ಯಾಯಪೀಠ ಈ ಸೂಚನೆ ನೀಡಿದ್ದು, ಭಾರತದ ಸಂವಿಧಾನದಲ್ಲಿ ದಲಿತ ಎಂಬ ಪದ ಉಲ್ಲೇಖವಾಗಿಲ್ಲ. ಹಾಗಾಗಿ ದಲಿತ ಪದದ ಬಳಕೆಯನ್ನು ತಡೆಹಿಡಿಯಬೇಕು. ಅದರ ಬದಲು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಎಂಬ ಪದ ಬಳಸಬಹುದು ಎಂದು ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಮೋಹರ್ ಅವರು ಸರ್ಕಾರದ ಪರಿಭಾಷೆಯ ನಡುವೆ ಅನಧಿಕೃತವಾಗಿ ದಲಿತ ಪದ ಬಳಸುವುದನ್ನು ವಿರೋಧಿಸಿ ಡಿಸೆಂಬರ್‌ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಿದ್ದರು ಪರ ವಕೀಲ ಜಿತೇಂದ್ರ ಕುಮಾರ್ ಶರ್ಮ ಹೇಳಿದ್ದಾರೆ.

ಮೇಲ್ವರ್ಗದವರು ದಲಿತ  ಪದವನ್ನು ಅವಹೇಳನಕಾರಿಯಾಗಿ ಬಳಸಿಕೊಳ್ಳುತ್ತಿದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT