ಚಿತ್ರರಂಗದ ‘ಕೃಷ್ಣ’ನಿಗೆ ಮೂವತ್ತೇಳು

7

ಚಿತ್ರರಂಗದ ‘ಕೃಷ್ಣ’ನಿಗೆ ಮೂವತ್ತೇಳು

Published:
Updated:
ಚಿತ್ರರಂಗದ ‘ಕೃಷ್ಣ’ನಿಗೆ ಮೂವತ್ತೇಳು

‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡವರು ಅಜಯ್‌ ರಾವ್‌. ಚಿತ್ರದಲ್ಲಿ ಮುಗ್ಧ ಪ್ರೇಮಿಯೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡು ಅಪಾರ ಮೆಚ್ಚುಗೆ ಗಳಿಸಿದ್ದರು. ಬಳ್ಳಾರಿಯ ಹೊಸಪೇಟೆಯವರಾದ ಅಜಯ್‌ ಹುಟ್ಟಿದ್ದು ಜನವರಿ 24, 1980ರಲ್ಲಿ. ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ ತಾಜ್‌ಮಹಲ್‌, ಪ್ರೇಮ್‌ಕಹಾನಿ, ಕೃಷ್ಣನ್‌ ಲವ್‌ ಸ್ಟೋರಿ, ಮನಸಿನ ಮಾತು, ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ, ಬ್ರೇಕಿಂಗ್‌ ನ್ಯೂಸ್‌, ಕೃಷ್ಣ ಲೀಲೆ ಮುಂತಾದ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಕಥೆ, ನಟನೆ, ನೃತ್ಯ, ಭಾವಾಭಿನಯಗಳನ್ನು ಅವರು ಒಪ್ಪಿಸುವ ರೀತಿ ಸಿನಿ ಪ್ರಿಯರನ್ನು ಎಂದಿಗೂ ಆಕರ್ಷಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry