ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗೆ ಸೀಮಿತ!

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಪದವಿ ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಜ್ಞಾನದ ಅರಿವು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯವು ಪದವಿ ಕೋರ್ಸ್‌ಗಳಿಗೆ ಸೆಮಿಸ್ಟರ್‌ ಪದ್ಧತಿ ಜಾರಿಗೆ ತಂದು ದಶಕವೇ ಕಳೆದಿದೆ. ಆದರೆ ವಿಶ್ವವಿದ್ಯಾಲಯವು ಇದರ ಉದ್ದೇಶ ಸಫಲತೆಗೆ ಒತ್ತು ನೀಡುವುದಕ್ಕಿಂತ, ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವುದಕ್ಕೆ ಮಾತ್ರ ಸೀಮಿತವಾಗಿ ಪರೀಕ್ಷಾ ಪ್ರಾಧಿಕಾರದಂತೆ ಕಾರ್ಯ ನಿರ್ವಹಿಸುತ್ತಿದೆ.

ಆರು ತಿಂಗಳ ಸೆಮಿಸ್ಟರ್‌ ಅವಧಿಯಲ್ಲಿ ಮೂರೂವರೆ ತಿಂಗಳು ಮಾತ್ರ ತರಗತಿಗಳು ನಡೆದು, ಉಳಿದ ಎರಡೂವರೆ ತಿಂಗಳು ಪರೀಕ್ಷೆ ಹಾಗೂ ಮೌಲ್ಯಮಾಪನಗಳಿಗೆ ವ್ಯಯವಾಗುತ್ತಿದೆ. ಈ ರೀತಿ ಪ್ರತಿ ವರ್ಷವೂ ಐದು ತಿಂಗಳು ಪರೀಕ್ಷಾ ಕಾರ್ಯಗಳಿಗೆ ಬಳಕೆಯಾಗುವ ಕಾರಣ, ಈ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಯ ಮತ್ತು ಶಕ್ತಿ ವ್ಯರ್ಥವಾಗುತ್ತಿದೆ.

ಇನ್ನಾದರೂ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅರಿತು, ವರ್ಷದಲ್ಲಿ ಶೇ 75ರಷ್ಟು ಸಮಯವನ್ನು ವಿದ್ಯಾರ್ಥಿ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಮೀಸಲಿಟ್ಟು, ಉಳಿದ ಶೇ 25ರಷ್ಟು ಅವಧಿಯಲ್ಲಿ ಪರೀಕ್ಷೆ ಹಾಗೂ ಮೌಲ್ಯಮಾಪನವನ್ನು ವ್ಯವಸ್ಥಿತವಾಗಿ ನಡೆಸಬೇಕು.

– ಎನ್‌. ಪ್ರಕಾಶ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT