ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

7

ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

Published:
Updated:
ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

ಅಂಕಾರೇಜ್‌ (ಅಲಾಸ್ಕಾ): ಇಲ್ಲಿನ ಕೊಡಾಕ್‌ ದ್ವೀಪದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 7.9ರಷ್ಟು ತೀವ್ರತೆ ದಾಖಲಾಗಿದ್ದು, ಕರಾವಳಿ ಭಾಗದ ಜನರನ್ನು ಎತ್ತರದ ಭಾಗಗಳಿಗೆ ಸ್ಥಳಾಂತರಿಸಲಾಯಿತು. ಅಲ್ಲದೇ ಸುನಾಮಿ ಎಚ್ಚರಿಕೆ ಸಂದೇಶ ಬಿತ್ತರಿಸಲಾಯಿತು.

ಕೆಲವು ತಾಸಿನ ಬಳಿಕ ಕರಾವಳಿ ಭಾಗದಲ್ಲಿ ಯಾವುದೇ ದೊಡ್ಡ ಅಲೆಗಳು ಕಾಣಿಸದ ಕಾರಣ ಎಚ್ಚರಿಕೆ ಸಂದೇಶ ರದ್ದುಗೊಳಿಸಿ ರಾಷ್ಟ್ರೀಯ ಸುನಾಮಿ ಕೇಂದ್ರದ ಅಧಿಕಾರಿಗಳು ಮತ್ತೊಂದು ಸಂದೇಶ ಕಳುಹಿಸಿ ಗೊಂದಲಗಳಿಗೆ ತೆರೆಎಳೆದರು.ಭೂಕಂಪನದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಲಾಸ್ಕಾದ ಆಂತರಿಕ ಭದ್ರತೆ ಹಾಗೂ ತುರ್ತು ವಿಭಾಗವು ತಿಳಿಸಿದೆ.

ಜಕಾರ್ತಾದಲ್ಲೂ ಭೂಕಂಪನ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಜನರನ್ನು ಸ್ಥಳಾಂತರಿ‌ಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry