ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ ಗಲ್ಲುಶಿಕ್ಷೆ ಪ್ರಕರಣ: ಗಡುವು ವಿಧಿಸಿದ ಐಸಿಜೆ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಹೇಗ್‌: ಬೇಹುಗಾರಿಕೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಲಿಖಿತ ವಾದ ಮಂಡನೆಗೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಸಮಯವನ್ನು ನಿಗದಿ ಮಾಡಿದೆ.

ಭಾರತಕ್ಕೆ ಏಪ್ರಿಲ್‌ 17 ಹಾಗೂ ಪಾಕಿಸ್ತಾನಕ್ಕೆ ಜುಲೈ 17ರ ಗಡುವು ನೀಡಲಾಗಿದೆ. ‘ಈ ಅವಧಿಯಲ್ಲಿ ಭಾರತವು ತನ್ನ ಹೇಳಿಕೆಯನ್ನು ದಾಖಲಿ
ಸಬೇಕು, ಆ ಹೇಳಿಕೆಗೆ ಪಾಕಿಸ್ತಾನವು ತನ್ನ ಮರು ಹೇಳಿಕೆಯನ್ನು ಈ ಗಡುವಿನಲ್ಲಿ ನೀಡಬೇಕು’ ಎಂದು ಕೋರ್ಟ್‌ ಹೇಳಿರುವುದಾಗಿ ವಿಶ್ವಸಂಸ್ಥೆಯ ಕಾನೂನು ವಿಭಾಗ ಮಾಹಿತಿ ನೀಡಿದೆ.

ಪಾಕಿಸ್ತಾನದ ಮಿಲಿಟರಿ ಕೋರ್ಟ್‌ ಜಾಧವ್‌ ಅವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಭಾರತ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಅಂತರರಾಷ್ಟ್ರೀಯ ಕೋರ್ಟ್‌ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT