ವಿಶ್ವಕಪ್‌ಗೆ ವೆಸ್ಟ್‌ಇಂಡೀಸ್ ಆತಿಥ್ಯ

7

ವಿಶ್ವಕಪ್‌ಗೆ ವೆಸ್ಟ್‌ಇಂಡೀಸ್ ಆತಿಥ್ಯ

Published:
Updated:
ವಿಶ್ವಕಪ್‌ಗೆ ವೆಸ್ಟ್‌ಇಂಡೀಸ್ ಆತಿಥ್ಯ

ದುಬೈ: ನವೆಂಬರ್‌ನಲ್ಲಿ ನಡೆಯಲಿರುವ ಮಹಿಳೆಯರ ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗೆ ವೆಸ್ಟ್‌ ಇಂಡೀಸ್ ಆತಿಥ್ಯ ವಹಿಸಲಿದೆ. ವಿಂಡೀಸ್‌ನ ಆ್ಯಂಟಿಗಾ, ಬಾರ್ಬಡೀಸ್, ಗಯಾನ ಮತ್ತು ಸೇಂಟ್ ಲೂಸಿಯಾಗಳಲ್ಲಿ ನವೆಂಬರ್‌ 9ರಿಂದ 24ರವರೆಗೆ ಪಂದ್ಯಗಳು ನಡೆಯಲಿವೆ ಎಂದು ಮಂಗಳವಾರ ಐಸಿಸಿ ಪ್ರಕಟಿಸಿದೆ.

2016ರಲ್ಲಿ ಕೋಲ್ಕತ್ತದಲ್ಲಿ ನಡೆದ ಟೂರ್ನಿಯಲ್ಲಿ  ವೆಸ್ಟ್‌ಇಂಡೀಸ್ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು. ಫೈನಲ್‌ನಲ್ಲಿ ಎಂಟು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಎದುರು ಜಯಿಸಿತ್ತು.  ಕಳೆದ ಬಾರಿ ಭಾರತದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ಸ್ಟೆಫನಿ ಟೇಲರ್ ವಹಿಸಿದ್ದರು. ಅವರಿಗೆ ಈಚೆಗೆ ಐಸಿಸಿಯು 2017ನೇ ಸಾಲಿನ ಶ್ರೇಷ್ಠ ನಾಯಕಿ ಪ್ರಶಸ್ತಿ ಪ್ರದಾನ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry