ರಾಖಿ ಹಲ್ದರ್‌ಗೆ ಚಿನ್ನ

7

ರಾಖಿ ಹಲ್ದರ್‌ಗೆ ಚಿನ್ನ

Published:
Updated:
ರಾಖಿ ಹಲ್ದರ್‌ಗೆ ಚಿನ್ನ

ಮಂಗಳೂರು: ರೈಲ್ವೇಸ್‌ ತಂಡದ ರಾಖಿ ಹಲ್ದರ್‌ ಮಂಗಳವಾರ ನಡೆದ ರಾಷ್ಟ್ರಮಟ್ಟದ  33ನೇ ಮಹಿಳೆಯರ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ 63 ಕೆ.ಜಿ.ವಿಭಾಗದಲ್ಲಿ ಕ್ಲೀನ್‌ ಮತ್ತು ಜರ್ಕ್‌ನಲ್ಲಿ 128 ಕೆ.ಜಿ. ಭಾರ ಎತ್ತುವ ಮೂಲಕ 19 ವರ್ಷದ ಹಿಂದಿನ ದಾಖಲೆಯನ್ನು ಮೀರಿದರು.

ಗ್ರೀಸ್‌ನ ಅಥೆನ್ಸ್‌ನಲ್ಲಿ 1999ರಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 127.5 ಕೆ.ಜಿ ಭಾರ ಎತ್ತಿ ದಾಖಲೆ ನಿರ್ಮಿಸಿದ್ದರು.

ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೇಟ್‌ಲಿಫ್ಟಿಂಗ್‌ ಸಂಸ್ಥೆ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ  ರೈಲ್ವೆ ತಂಡದ ರಾಖಿ ಒಟ್ಟು 230 ಕೆ.ಜಿ ಭಾರ ಎತ್ತಿದರು. ಸ್ನ್ಯಾಚ್‌–102 ಕೆ.ಜಿ ಹಾಗೂ ಕ್ಲೀನ್‌ ಮತ್ತು ಜರ್ಕ್‌ನಲ್ಲಿ 128 ಕೆ.ಜಿ ಭಾರ ಎತ್ತಿ ಚಿನ್ನಕ್ಕೆ ಮುತ್ತಿಕ್ಕಿದರು. ಕರ್ನಾಟಕದ ಎಸ್‌. ತಸಾನಾ ಚಾನು 202 ಕೆ.ಜಿ ಭಾರ ಎತ್ತಿ ಬೆಳ್ಳಿಪದಕ ಪದೆದರು. ಸ್ನ್ಯಾಚ್‌– 86 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌– 116 ಕೆ.ಜಿ ಭಾರ ಎತ್ತಿದರು. ಆಲ್‌ ಇಂಡಿಯಾ ಪೊಲೀಸ್‌  ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ನ ಅಮನದೀಪ್‌ ಕೌರ್‌ 191 ಕೆ.ಜಿ.(ಸ್ನ್ಯಾಚ್‌ 85, ಕ್ಲೀನ್‌ ಮತ್ತು ಜರ್ಕ್ 106 ) ಭಾರ ಎತ್ತಿ ಕಂಚಿನ ಪದಕ ಪಡೆದರು.

‘ಕರ್ಣಂ ಮಲ್ಲೇಶ್ವರಿ ಅವರ ಎಲ್ಲ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸುವ ಗುರಿ ಇದೆ. ಆದರೆ, ಈ ಬಾರಿ ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 128 ಕೆ. ಜಿ ಭಾರ ಎತ್ತುವುದಕ್ಕೆ ಮಾತ್ರ ಸಾಧ್ಯ ಆಯಿತು’ ಎಂದು ರಾಖಿ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶಗಳು: ಪುರುಷರು: 77 ಕೆ. ಜಿ : ಅಜಯ್‌ ಸಿಂಗ್‌ , ಸರ್ವೀಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ (ಸ್ನ್ಯಾಚ್‌ 144 ಕೆ.ಜಿ., ಕ್ಲೀನ್ ಮತ್ತು ಜರ್ಕ್ 182 ಕೆ.ಜಿ. ಒಟ್ಟು: 326 ಕೆ.ಜಿ)–1,  ಎಸ್‌ ಸತೀಶ್‌ ಕುಮಾರ್‌ , ರೈಲ್ವೇಸ್ (ಸ್ನ್ಯಾಚ್‌ 143 ಕೆ.ಜಿ., ಕ್ಲೀನ್ ಮತ್ತು ಜರ್ಕ್ 173 ಕೆ.ಜಿ. ಒಟ್ಟು: 316 ಕೆ.ಜಿ) –2, ಪಾಪುಲ್ ಚಿಯಾಂಗ್ ಮಾಯ್, ಅಸ್ಸಾಂ (ಸ್ನ್ಯಾಚ್‌ 136 ಕೆ.ಜಿ., ಕ್ಲೀನ್ ಮತ್ತು ಜರ್ಕ್ 167 ಕೆ.ಜಿ. ಒಟ್ಟು: 303 ಕೆ.ಜಿ)–3;

ಮಹಿಳೆಯರು: 69 ಕೆ.ಜಿ: ಪೂನಂ ಯಾದವ್‌, ರೈಲ್ವೇಸ್‌ (ಸ್ನ್ಯಾಚ್‌ 96 ಕೆ.ಜಿ., ಕ್ಲೀನ್ ಮತ್ತು ಜರ್ಕ್ 118 ಕೆ.ಜಿ. ಒಟ್ಟು: 214 ಕೆ.ಜಿ)–1, ಸರ್‌ಬ್ಜೀತ್‌ ಕೌರ್‌,  ಪಂಚಾಬ್‌ (ಸ್ನ್ಯಾಚ್‌ 86 ಕೆ.ಜಿ., ಕ್ಲೀನ್ ಮತ್ತು ಜರ್ಕ್ 119 ಕೆ.ಜಿ. ಒಟ್ಟು: 205 ಕೆ.ಜಿ)–2, ಎಸ್‌.ಕೆ. ಅಲಿಮಾ ಬೇಗಂ, ಆಂಧ್ರಪ್ರದೇಶ (ಸ್ನ್ಯಾಚ್‌ 88 ಕೆ.ಜಿ., ಕ್ಲೀನ್ ಮತ್ತು ಜರ್ಕ್ 113 ಕೆ.ಜಿ. ಒಟ್ಟು: 201 ಕೆ.ಜಿ)–3,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry