ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌ ಅಂತಿಮ ಹಣಾಹಣಿ ಇಂದು

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾವಾಣಿ ‘ಕ್ಷಿಜ್‌ ಚಾಂಪಿಯನ್‌ಷಿಪ್‌’ನ ಅಂತಿಮ ಸ್ಪರ್ಧೆ ಇಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನೆರವೇರಲಿದೆ.

ರಾಜ್ಯದಾದ್ಯಂತ 9 ವಲಯಗಳಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರು ಇಂದು ಅಂತಿಮ ಸುತ್ತಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 8.30ರಿಂದ ನೋಂದಣಿ ಆರಂಭವಾಗುವುದು. 9.30ಯಿಂದ ಸ್ಪರ್ಧೆ ಆರಂಭವಾಗುವುದು. ಲಿಖಿತ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ಬೆಂಗಳೂರು ವಲಯದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯುವರು. ಇದರಲ್ಲಿ ವಿಜೇತರಾದವರು ಅಂತಿಮ ಸುತ್ತನ್ನು ಪ್ರವೇಶಿಸುವರು.

ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ₹50,000 ನಗದು ಬಹುಮಾನ ನೀಡಲಾಗುವುದು. ಎರಡನೇ ಬಹುಮಾನ ₹30,000, ಮೂರನೆಯ ಬಹುಮಾನ ₹10,000 ನಾಲ್ಕನೆಯ ಮತ್ತು ಐದನೆಯ ಸ್ಥಾನ ಪಡೆದವರಿಗೆ ಕ್ರಮವಾಗಿ ₹6,000 ಹಾಗೂ ₹4, 000  ನಗದು ಬಹುಮಾನ ನೀಡಲಾಗುವುದು. ಈ ರಸಪ್ರಶ್ನೆಯನ್ನು ‘ದೀಕ್ಷಾ’ ಪ್ರಸ್ತುತಪಡಿಸುತ್ತಿದೆ.

ಜ.8ರಿಂದ ಜ.22ರವರೆಗೆ ವಾಲ್ನಟ್ಸ್‌ ಸಂಸ್ಥೆಯ ರಾಘವ್‌ ಚಕ್ರವರ್ತಿ ಹಾಗೂ ಸಾರ್ಥಕ್‌ ಕುಂಟಿಯಾ ಪ್ರಜಾವಾಣಿ ಸಿಬ್ಬಂದಿ ಜೊತೆಗೆ ಕರ್ನಾಟಕದಾದ್ಯಂತ 9 ಪ್ರಮುಖ ನಗರಗಳಲ್ಲಿ ಸ್ಪರ್ಧೆಯನ್ನು ನಡೆಸಿಕೊಟ್ಟಿದ್ದಾರೆ. 9 ತಂಡಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದಿವೆ.

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಕಾರ್‌ ರೇಸ್‌ ಡ್ರೈವರ್‌ ಹರ್ಷಿತಾ ಗೌಡ ಹಾಗೂ ಅಂತರರಾಷ್ಟ್ರೀಯ ಅಂಗವಿಕಲ ಈಜು ಪಟು ನಿರಂಜನ್‌ ಮುಕುಂದನ್‌, ಚಲನಚಿತ್ರ ನಟ ಬಾಲು ನಾಗೇಂದ್ರ, ಚಿತ್ರ ನಿರ್ದೇಶಕ ಸಿಂಪಲ್‌ ಸುನಿ ಬಹುಮಾನ ವಿತರಿಸಲಿದ್ದಾರೆ.
ಸನ್‌ಪ್ಯೂರ್‌, ಸಿಂಡಿಕೇಟ್‌ ಬ್ಯಾಂಕ್‌, ಗ್ಲುಕೊವಿಟ ಈ ಸ್ಪರ್ಧೆಯನ್ನು ಪ್ರಾಯೋಜಿಸುತ್ತಿವೆ.

ಅಂತಿಮ ಸುತ್ತಿಗೆ ಆಯ್ಕೆಯಾದವರು
ಎನ್‌. ಅಭಯ್‌ ಮತ್ತು ವಶಿಷ್ಠ ಮಹರ್ಷಿ ಪಬ್ಲಿಕ್‌ ಶಾಲೆ, ಮೈಸೂರು

ಟಿ.ತನುಷ್‌ ಮತ್ತು ಆರ್‌. ಆಕಾಶ್‌ ಆ್ಯಂಬರ್‌ವ್ಯಾಲಿ ವಸತಿ ಶಾಲೆ, ಚಿಕ್ಕಮಗಳೂರು

ಧೀರೇನ್‌ ಮತ್ತು ಚಂದನ್‌ ವಿದ್ಯೋದಯ ಪಬ್ಲಿಕ್‌ ಶಾಲೆ ಉಡುಪಿ

ಅನ್ವೇಷ್‌ ಭಟ್‌ ಮತ್ತು ರಾಹುಲ್‌ ಕಲ್ಯಾಣ್‌ ಶೆಟ್ಟರ್‌ ದಾಕ್ಷಾಯಣಿ ಕಲ್ಯಾಣ್‌ ಶೆಟ್ಟರ್‌ ಶಾಲೆ, ಹುಬ್ಬಳ್ಳಿ‌

ನಿತೀಶ್‌ ಎಂ. ಚೌಗಲೆ ಮತ್ತು ಎಂ.ಡಿ. ಆರೀಫ್‌ ಪಟೇಲ, ಸೈನಿಕ್‌ ಶಾಲೆ ವಿಜಯಪುರ

ವಿರಾಜ್‌ ವಿ. ಸತಾಳಿ ಮತ್ತು ಶಶಾಂಕ್‌ ಮಂದಕನಹಳ್ಳಿ ಚಂದ್ರಕಾಂತ ಪಾಟೀಲ ಶಾಲೆ ಕಲಬುರ್ಗಿ

ಸಂತೋಷ ಯಾದವ ಮತ್ತು ಪ್ರಭಂಜನ್‌ ಎಸ್‌ ಮದರ್‌ ಎಜುಕೇಶನ್‌ ಟ್ರಸ್ಟ್‌ ಶಾಲೆ, ರಾಯಚೂರು

ಕೀರ್ತಿರಾಜ್‌ ಮತ್ತು ಇಶಾ ಕೋಟೆ ನಿಟ್ಟೂರ್‌ ಸೆಂಟ್ರಲ್‌ ಶಾಲೆ, ರಾಣೆಬೆನ್ನೂರು

ಅಚ್ಯತ್‌ ಶರ್ಮಾ ಮತ್ತು ಎಂ.ವಿ. ಶ್ರೇಯಸ್‌ ವಿದ್ಯಾನಿಕೇತನ ಶಾಲೆ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT