ರಾಷ್ಟ್ರೀಯ ಶೂಟಿಂಗ್‌: ಗೌರಿಗೆ ಮುನ್ನಡೆ

7

ರಾಷ್ಟ್ರೀಯ ಶೂಟಿಂಗ್‌: ಗೌರಿಗೆ ಮುನ್ನಡೆ

Published:
Updated:
ರಾಷ್ಟ್ರೀಯ ಶೂಟಿಂಗ್‌: ಗೌರಿಗೆ ಮುನ್ನಡೆ

ಹುಬ್ಬಳ್ಳಿ: ಕರಾರುವಾಕ್ಕಾಗಿ ಗುರಿ ಹಿಡಿದ ಗೌರಿ ಹರಿಬಾಬು ಹೋಲಿ ಅವರು ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ ಮೊದಲ ಬಾರಿಗೆ ಆಯೋಜಿಸಿರುವ ರಾಷ್ಟ್ರೀಯ ಮುಕ್ತ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಮೊದಲ ದಿನದ ಅಂತ್ಯಕ್ಕೆ ಮುನ್ನಡೆ ಹೊಂದಿದ್ದಾರೆ.

ಮಹಾರಾಷ್ಟ್ರದ ಗೌರಿ ಮೊದಲ ಒಂಬತ್ತು ಸುತ್ತುಗಳ ಅಂತ್ಯಕ್ಕೆ 289 ಪಾಯಿಂಟ್ಸ್‌ ಕಲೆ ಹಾಕಿದರು. ಇನ್ನು ಆರು ಸುತ್ತುಗಳು ಬಾಕಿಯಿದ್ದು, ಓಪನ್‌ ಸೈಟ್‌ ವಿಭಾಗದ ಪ್ರಶಸ್ತಿ ಯಾರಿಗೆ ಎಂಬುದು ಬುಧವಾರ ನಿರ್ಧಾರವಾಗಲಿದೆ. ಮಹಾರಾಷ್ಟ್ರದ ಅಶ್ವಿನಿ ಚಂದ್ರಕಾಂತ ಧವಳೆ 286 ಪಾಯಿಂಟ್ಸ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೈಸೂರಿನ  ಎಚ್‌.ಎಸ್. ವಿವೇಕ 284 ಪಾಯಿಂಟ್ಸ್‌ನಿಂದ ಮೂರನೇ ಸ್ಥಾನದಲ್ಲಿದ್ದಾರೆ.

ಬೆಂಗಳೂರಿನ ಗನ್‌ ಫಾರ್‌ ಗ್ಲೋರಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮಹಮ್ಮದ್‌ ಹಸ್ನೀನ್‌ ಶರೀಫ್‌ ಓಪನ್‌ ಸೈಟ್‌ ವಿಭಾಗದ ಒಂಬತ್ತು ಸುತ್ತುಗಳ ಅಂತ್ಯಕ್ಕೆ ಒಟ್ಟು 274 ಪಾಯಿಂಟ್ಸ್‌ ಕಲೆ ಹಾಕಿದರು.

ಪ್ಯಾರಾ ಶೂಟರ್‌ಗಳಿಗೆ ನಡೆದ  ಸ್ಪರ್ಧೆಯಲ್ಲಿ ಸ್ಥಳೀಯ ಪ್ರತಿಭೆಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಹಾರಾಷ್ಟ್ರದ ಸ್ವರೂಪ್‌ ಕುಮಾರ 406 ಪಾಯಿಂಟ್ಸ್‌ನಿಂದ ಅಗ್ರಸ್ಥಾನದಲ್ಲಿದ್ದಾರೆ.

ಹುಬ್ಬಳ್ಳಿಯ ಜ್ಯೋತಿ ಸಣ್ಣಕ್ಕಿ 370 ಮತ್ತು ಧಾರವಾಡದ ಶಂಕರಲಿಂಗ ತವಳಿ 322 ಪಾಯಿಂಟ್ಸ್‌ನಿಂದ ಕ್ರಮವಾಗಿ ನಂತರದ ಎರಡು ಸ್ಥಾನ ಹೊಂದಿದ್ದಾರೆ. ಮೊದಲ ದಿನ ಒಟ್ಟು 90 ಶೂಟರ್‌ಗಳು ಪಾಲ್ಗೊಂಡಿದ್ದರು. ಇದರಲ್ಲಿ ಆರು ಪ್ಯಾರಾ ಸ್ಪರ್ಧಿಗಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry