‘ಉದ್ಯಮಕ್ಕೆ ರತ್ನಗಂಬಳಿ’

7

‘ಉದ್ಯಮಕ್ಕೆ ರತ್ನಗಂಬಳಿ’

Published:
Updated:
‘ಉದ್ಯಮಕ್ಕೆ ರತ್ನಗಂಬಳಿ’

ದಾವೋಸ್‌: ಸುಲಲಿತ ವ್ಯಾಪಾರ, ವಹಿವಾಟಿಗೆ ಅಡ್ಡಿಯಾಗಿದ್ದ ಎಲ್ಲ ತೊಡಕುಗಳನ್ನು ನಿವಾರಿಸಲಾಗಿದ್ದು, ಭಾರತದಲ್ಲಿ ಈಗ ಉದ್ಯಮಿಗಳಿಗೆ ರತ್ನಗಂಬಳಿ ಸ್ವಾಗತ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಾವೋಸ್‌ನಲ್ಲಿ ಮಂಗಳವಾರ ಆರಂಭವಾದ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಶೃಂಗಸಭೆಯಲ್ಲಿ ಹಿಂದಿಯಲ್ಲಿಯೇ ಪ್ರಧಾನ ಭಾಷಣ ಮಾಡಿದ ಅವರು, ಜಾಗತಿಕ ಕಂಪೆನಿಗಳು ಮತ್ತು ಉದ್ಯಮಿಗಳಿಗೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಆಹ್ವಾನ ನೀಡಿದರು.

ಉದ್ಯಮ ಆರಂಭಕ್ಕೆ ಪರವಾನಗಿ ನೀಡಲು ಅನಗತ್ಯ ವಿಳಂಬ ಮಾಡುತ್ತಿದ್ದ ವ್ಯವಸ್ಥೆಗೆ ಕೊನೆ ಹಾಡಲಾಗಿದೆ. ತಮ್ಮ ಸರ್ಕಾರ ಜಾರಿಗೆ ತಂದ ಸುಧಾರಣಾ ಕ್ರಮಗಳಿಂದಾಗಿ ಭಾರತದಲ್ಲಿ ಈಗ ಹೂಡಿಕೆ, ತಯಾರಿಕೆ ತುಂಬಾ ಸುಲಭವಾಗಿದೆ. 1,400 ಅನಗತ್ಯ ಕಾನೂನುಗಳನ್ನು ರದ್ದು ಮಾಡಲಾಗಿದೆ. ವಿದೇಶಿ ನೇರ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ ಎಂದರು.

ದೊಡ್ಡ ಆರ್ಥಿಕ ಶಕ್ತಿ: 2025ರ ವೇಳೆಗೆ ಭಾರತ 325 ಲಕ್ಷ ಕೋಟಿ ಮೌಲ್ಯದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಯೋತ್ಪಾದನೆ, ಹವಾಮಾನ ವೈಪರೀತ್ಯ, ಸೈಬರ್‌ ಮತ್ತು ಪರಮಾಣು ಸುರಕ್ಷತೆ ಇಡೀ ವಿಶ್ವವನ್ನು ಕಾಡುತ್ತಿರುವ ಸವಾಲುಗಳಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry