‘₹2 ಸಾವಿರಕ್ಕಿಂತ ಹೆಚ್ಚು ಹಣ ದೇಣಿಗೆ ನೀಡಬೇಡಿ’

7

‘₹2 ಸಾವಿರಕ್ಕಿಂತ ಹೆಚ್ಚು ಹಣ ದೇಣಿಗೆ ನೀಡಬೇಡಿ’

Published:
Updated:

ನವದೆಹಲಿ: ಯಾವುದೇ ರಾಜಕೀಯ ಪಕ್ಷ ಅಥವಾ ನೋಂದಾಯಿತ ಸಂಸ್ಥೆಗಳಿಗೆ ಹಣದ ರೂಪದಲ್ಲಿ ₹2 ಸಾವಿರಕ್ಕಿಂತ ಹೆಚ್ಚು ದೇಣಿಗೆ ನೀಡಬಾರದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

‘ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ ₹2 ಲಕ್ಷ ಅಥವಾ

ಅದಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಬೇಡಿ. ಒಂದೇ ದಿನ ಒಂದೇ ವಿಷಯಕ್ಕೆ ಸಂಬಂಧಿಸಿ ದೊಡ್ಡ ಮೊತ್ತದ ಹಣ ಸ್ವೀಕರಿಸುವುದು/ ನೀಡುವುದು ಮಾಡಬೇಡಿ.

ಸ್ಥಿರಾಸ್ತಿಗೆ ಸಂಬಂಧಿಸಿ ₹20 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣ ನೀಡುವುದು, ಸ್ವೀಕರಿಸುವುದು ಬೇಡ. ಉದ್ಯಮ/ವೃತ್ತಿಗೆ ಸಂಬಂಧಿಸಿದ ವೆಚ್ಚದಲ್ಲಿ ₹10 ಸಾವಿರಕ್ಕಿಂತ ಹೆಚ್ಚು ಹಣ ನೀಡಬೇಡಿ’ ಎಂದು ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತುಗಳಲ್ಲಿ ಸಲಹೆ ನೀಡಲಾಗಿದೆ.

ಹಣದ ವ್ಯವಹಾರಗಳಲ್ಲಿ ಈ ಎಲ್ಲ ಮಿತಿಗಳನ್ನು ಮೀರಿದರೆ ಸಂಬಂಧಪಟ್ಟವರಿಗೆ ತೆರಿಗೆ ವಿಧಿಸಬೇಕಾಗಬಹುದು ಅಥವಾ ದಂಡ ಸಹ ವಿಧಿಸುವ ಸಾಧ್ಯತೆ ಇದೆ. ನಿಯಮಗಳನ್ನು ಉಲ್ಲಂಘಿಸಿದ್ದು ತಿಳಿದುಬಂದರೆ ಜನರು, ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಬಹುದು.

ಕಪ್ಪುಹಣ ಅಥವಾ ಅಕ್ರಮ ಹಣ ವರ್ಗಾವಣೆ ಕುರಿತು blackmoneyinfo@incometax.gov.in.ಗೆ ಈ ಇಮೇಲ್‌ ವಿಳಾಸಕ್ಕೆ ಮಾಹಿತಿ ರವಾನಿಸಬಹುದು ಎಂದು ಇಲಾಖೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry