ಅಮೆರಿಕ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಅರುಂಧತಿ

7

ಅಮೆರಿಕ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಅರುಂಧತಿ

Published:
Updated:

ನವದೆಹಲಿ: ಅಮೆರಿಕದ ಪ್ರತಿಷ್ಠಿತ ನ್ಯಾಷನಲ್‌ ಬುಕ್‌ ಕ್ರಿಟಿಕ್ಸ್ ಸರ್ಕಲ್‌ನ 2017ರ ಪ್ರಶಸ್ತಿಗೆ ಆಯ್ಕೆ ಮಾಡಿರುವ ಅಂತಿಮ ಐವರ ಪಟ್ಟಿಯಲ್ಲಿ ಲೇಖಕಿ ಅರುಂಧತಿ ರಾಯ್‌ ಮತ್ತು ಪಾಕಿಸ್ತಾನದ ಮೊಹ್ಸಿನ್‌ ಹಮೀದ್‌ ಅವರಿದ್ದಾರೆ.

ಅರುಂಧತಿ ರಾಯ್‌ ಅವರ ‘ದಿ ಮಿನಿಸ್ಟರಿ ಆಫ್‌ ಅಟ್‌ಮೋಸ್ಟ್ ಹ್ಯಾಪಿನೆಸ್‌' ಮತ್ತು ಹಮೀದ್‌ ಅವರ ‘ಎಕ್ಸಿಟ್‌ ವೆಸ್ಟ್‌’ ಕೃತಿಗಳಿಗಾಗಿ ಇಬ್ಬರನ್ನು ಪರಿಗಣಿಸಲಾಗಿದೆ.

ಮಾರ್ಚ್‌ 15ರಂದು ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. 1975ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಅಮೆರಿಕದಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry