ಹೂಡಿಕೆದಾರರ ಸಂಪತ್ತು ₹ 1 ಲಕ್ಷ ಕೋಟಿ ವೃದ್ಧಿ

7

ಹೂಡಿಕೆದಾರರ ಸಂಪತ್ತು ₹ 1 ಲಕ್ಷ ಕೋಟಿ ವೃದ್ಧಿ

Published:
Updated:
ಹೂಡಿಕೆದಾರರ ಸಂಪತ್ತು ₹ 1 ಲಕ್ಷ ಕೋಟಿ ವೃದ್ಧಿ

ನವದೆಹಲಿ: ಮುಂಬೈ ಷೇರುಪೇಟೆ ಸೂಚ್ಯಂಕವು (ಬಿಎಸ್‌ಇ) ಮಂಗಳವಾರದ ವಹಿವಾಟಿನಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿರುವುದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 1 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯವು ಕೂಡ ₹ 156.56 ಲಕ್ಷ ಕೋಟಿಗಳಿಗೆ ತಲುಪಿದೆ.

‘ಕೇಂದ್ರ ಬಜೆಟ್‌ ಮಂಡನೆಯವರೆಗೂ ಷೇರುಪೇಟೆಯ ಈ ಚಲನೆ ಮುಂದುವರಿಯಲಿದೆ. ಗ್ರಾಹಕ ಉಪಭೋಗ ಪ್ರಮಾಣ ಹೆಚ್ಚಿಗೆ ಇರುವುದು ಹಾಗೂ ತಂತ್ರಜ್ಞಾನ ಕಂಪನಿಗಳ ತ್ರೈಮಾಸಿಕ ಫಲಿತಾಂಶವು ಮಾರುಕಟ್ಟೆಯ ನಿರೀಕ್ಷೆಯಂತೆಯೇ ಪ್ರಕಟವಾಗುತ್ತಿರುವುದು ಸಕಾರಾತ್ಮಕ ಚಟುವಟಿಕೆ ನಡೆಯುವಂತೆ ಮಾಡಿದೆ’ ಎಂದು ಯೆಸ್ ಸೆಕ್ಯುರಿಟೀಸ್‌ನ  ಹಿರಿಯ ಉಪಾಧ್ಯಕ್ಷೆ ನಿತಾಶಾ ಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಬಹುನಿರೀಕ್ಷಿತ ತ್ರೈಮಾಸಿಕ ಗಳಿಕೆಯಿಂದ ಮಾರುಕಟ್ಟೆಯು ಸಂಭ್ರಮಿಸುತ್ತಿದೆ. ಬ್ಯಾಂಕಿಂಗ್, ಎಫ್‌ಎಂಸಿಜಿ, ಗ್ರಾಹಕ ಬಳಕೆ ಮತ್ತು ಐ.ಟಿ ಒಳಗೊಂಡು ಬಹುತೇಕ ಎಲ್ಲಾ ವಲಯಗಳೂ ನಿರೀಕ್ಷಿತ ಸಾಧನೆ ಪ್ರಕಟಿಸುತ್ತಿವೆ’ ಎಂದು ಆ್ಯಕ್ಸಿಸ್ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಥುಕ್ರಾಲ್‌ ಹೇಳಿದ್ದಾರೆ.

‘2000ರದ ನಂತರ ಇದೇ ಮೊದಲಿಗೆ ಈ ರೀತಿಯ ಖರೀದಿ ವಹಿವಾಟು ನಡೆದಿದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ರಾಜಕೀಯ ವಿದ್ಯಮಾನಗಳನ್ನೂ ನಿರ್ಲಕ್ಷಿಸಿ, ಸೂಚ್ಯಂಕ ಏರಿಕೆ ಕಾಣುತ್ತಿದೆ’ ಎಂದು ರೆಲಿಗೇರ್‌ ಬ್ರೋಕಿಂಗ್‌ ಸಂಸ್ಥೆಯ ಅಧ್ಯಕ್ಷ ಜಯಂತ್‌ ಮಾಂಗ್ಲಿಕ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry