ಟೆಕ್ನೊ ಸ್ಮಾರ್ಟ್‌ಫೋನ್ ಬಿಡುಗಡೆ

7

ಟೆಕ್ನೊ ಸ್ಮಾರ್ಟ್‌ಫೋನ್ ಬಿಡುಗಡೆ

Published:
Updated:
ಟೆಕ್ನೊ ಸ್ಮಾರ್ಟ್‌ಫೋನ್ ಬಿಡುಗಡೆ

ನವದೆಹಲಿ: ಟ್ರಾನ್ಸಿಷನ್ ಇಂಡಿಯಾದ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಟೆಕ್ನೊ ಮೊಬೈಲ್ ‘ಕ್ಯಾಮನ್ ಐ’ ಯನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಕ್ಯಾಮನ್ ಸರಣಿಯ ಮೊಬೈಲ್‌ಗಳು ‘ಕ್ಯಾಮೆರಾ ಕೇಂದ್ರಿತ’ವಾಗಿವೆ. ಈ ಸ್ಮಾರ್ಟ್‌ಫೋನ್ ಛಾಯಾಗ್ರಹಣ ಅನುಭವನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಲಿದೆ. ಹವ್ಯಾಸಿ ಮತ್ತು ವೃತ್ತಿಪರ ಫೋಟೋಗ್ರಫಿಯ ನಡುವಣ ವ್ಯತ್ಯಾಸ ತಗ್ಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ. ಮೂರು ಬಣ್ಣಗಳಲ್ಲಿ ಲಭ್ಯ ಇರುವ ಇದರ ಬೆಲೆ ₹ 8,990. ಫೆಬ್ರುವರಿ ಮೊದಲ ವಾರದಲ್ಲಿ ಖರೀದಿಗೆ ಲಭ್ಯವಾಗಿರಲಿದೆ. 13 ಎಂಪಿ ಕ್ಯಾಮೆರಾ ಮತ್ತು 13 ಎಂಪಿ ರಿಯರ್ ಕ್ಯಾಮೆರಾ ಒಳಗೊಂಡಿದೆ.

‘ಸ್ಥಳೀಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಮೊಬೈಲ್‌ ಅಭಿವೃದ್ಧಿಪಡಿಸಿ, ಅವರ ಇಷ್ಟಾನಿಷ್ಟ ಪೂರೈಸುವತ್ತ ಗಮನಹರಿಸಿದ್ದೇವೆ. ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್‌ ತಯಾರಿಕೆಗೆ ನಾವು ಆದ್ಯತೆ ನೀಡುತ್ತಿದ್ದೇವೆ. ದೇಶದ ಐದು ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದು ಎಂದು ಗುರುತಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದೇವೆ’ ಎಂದು ಟ್ರಾನ್ಸಿಷನ್ ಹೋಲ್ಡಿಂಗ್ಸ್ ಸಂಸ್ಥೆಯ ಉಪಾಧ್ಯಕ್ಷ ಲಿನ್ ಕ್ವಿನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry