ಷೇರು ಮಾರಾಟಕ್ಕೆ ಸರ್ಕಾರ ಒಪ್ಪಿಗೆ

7

ಷೇರು ಮಾರಾಟಕ್ಕೆ ಸರ್ಕಾರ ಒಪ್ಪಿಗೆ

Published:
Updated:

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಮತ್ತು ಗೇಲ್‌ ಇಂಡಿಯಾದಲ್ಲಿ ಹೊಂದಿರುವ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನಲ್ಲಿ (ಎಚ್‌ಪಿಸಿಎಲ್‌) ಕೇಂದ್ರ ಸರ್ಕಾರದ ಶೇ 51 ರಷ್ಟು ಷೇರುಗಳನ್ನು  ‘ಒಎನ್‌ಜಿಸಿ’ ಖರೀದಿಸಲಿದೆ. ಇದಕ್ಕೆ ಅಗತ್ಯವಾದ ಬಂಡವಾಳ ಹೊಂದಿಸಿಕೊಳ್ಳಲು ಐಒಸಿ ಮತ್ತು ಗೇಲ್ ಇಂಡಿಯಾ

ದಲ್ಲಿನ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಐಒಸಿಯಲ್ಲಿ ಶೇ 13.77 ರಷ್ಟು ಷೇರುಗಳನ್ನು ಹೊಂದಿದೆ. ಮಂಗಳವಾರದ ಷೇರಿನ ಬೆಲೆಯ ಪ್ರಕಾರ ಒಟ್ಟು ಮೊತ್ತ ₹ 26,000 ಕೋಟಿ. ಗೇಲ್‌ ಇಂಡಿಯಾದಲ್ಲಿ ಶೇ 4.86 ರಷ್ಟು ಷೇರುಗಳನ್ನು ಹೊಂದಿದ್ದು, ಮಂಗಳವಾರದ ಷೇರಿನ ಬೆಲೆಯಂತೆ ಒಟ್ಟಾರೆ

₹ 3,847 ಕೋಟಿ ಆಗುತ್ತದೆ.

ಷೇರು ಮಾರಾಟಕ್ಕೆ ಎಲ್‌ಐಸಿ ಜತೆ ಮಾತುಕತೆ ನಡೆಸಿತ್ತು. ಆದರೆ, ಹಾಲಿ ದರಕ್ಕಿಂತ ಶೇ 10 ರಷ್ಟು ಕಡಿಮೆ ಬೆಲೆಗೆ ನೀಡಿದರೆ ಖರೀದಿಸುವುದಾಗಿ ಎಲ್‌ಐಸಿ ಹೇಳಿದೆ. ಹೀಗಾಗಿ ಮುಕ್ತ ಮಾರುಕಟ್ಟೆಯಲ್ಲಿಯೇ ಷೇರುಗಳನ್ನು ಮಾರಾಟ ಮಾಡಲು ಒಎನ್‌ಜಿಸಿ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry