ಪೆಟ್ರೋಲ್‌, ಡೀಸೆಲ್‌ ಬೆಲೆ 4 ವರ್ಷದಲ್ಲೇ ಗರಿಷ್ಠ ಏರಿಕೆ

7

ಪೆಟ್ರೋಲ್‌, ಡೀಸೆಲ್‌ ಬೆಲೆ 4 ವರ್ಷದಲ್ಲೇ ಗರಿಷ್ಠ ಏರಿಕೆ

Published:
Updated:
ಪೆಟ್ರೋಲ್‌, ಡೀಸೆಲ್‌ ಬೆಲೆ 4 ವರ್ಷದಲ್ಲೇ ಗರಿಷ್ಠ ಏರಿಕೆ

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್‌, ಡೀಸೆಲ್‌ ದರ ನಾಲ್ಕು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ಹೀಗಾಗಿ ಅಬಕಾರಿ ಸುಂಕ ಕಡಿತ ಮಾಡುವಂತೆ ಪೆಟ್ರೋಲಿಯಂ ಸಚಿವಾಲಯ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ಸದ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಕಾಣುತ್ತಿದೆ. ಇದು ದೇಶದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ 2018–19ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಸುಂಕ ತಗ್ಗಿಸುವಂತೆ ಪೆಟ್ರೋಲಿಯಂ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯಲ್ಲಿ ಒಂದು ಲೀಟರ್‌ ಪೆಟ್ರೋಲ್‌ ₹72.38ಕ್ಕೆ ಮಾರಾಟವಾಗುತ್ತಿದೆ. ಇದು 2014ರ ಮಾರ್ಚ್‌ ನಂತರದ ಅತ್ಯಂತ ಗರಿಷ್ಠ ದರವಾಗಿದೆ.

ಮುಂಬೈನಲ್ಲಿ ₹80 ದಾಟಿದೆ. ಡೀಸೆಲ್‌ ದರ ಪ್ರತಿ ಲೀಟರಿಗೆ ₹ 63.20ರ ದಾಖಲೆ ಮಟ್ಟ ತಲುಪಿದೆ. ಮುಂಬೈನಲ್ಲಿ ವ್ಯಾಟ್‌ ಹೆಚ್ಚಿರುವುದರಿಂದ ಒಂದು ಲೀಟರಿಗೆ ₹ 67.30 ರಷ್ಟಿದೆ. 2017ರ ಡಿಸೆಂಬರ್‌ 12ರಿಂದ ಇದುವರೆಗೆ ಪೆಟ್ರೋಲ್‌ ದರ ಪ್ರತಿ ಲೀಟರಿಗೆ ₹3.31 ರಷ್ಟು ಮತ್ತು ಡೀಸೆಲ್‌ ದರ ಪ್ರತಿ ಲೀಟರಿಗೆ ₹4.86 ರಷ್ಟು ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry