ತೈಲ ದರ ಆಧರಿಸದ ಇಂಧನ ಬೆಲೆ

7

ತೈಲ ದರ ಆಧರಿಸದ ಇಂಧನ ಬೆಲೆ

Published:
Updated:
ತೈಲ ದರ ಆಧರಿಸದ ಇಂಧನ ಬೆಲೆ

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವನ್ನು ಪರಿಗಣಿಸಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ನಿರ್ಧಾರ ಮಾಡಲಾಗುತ್ತದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಚ್ಚಾ ತೈಲ ದರದಲ್ಲಿ ಆಗಿರುವ ಏರಿಳಿತಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ಮಾಡಿಲ್ಲ. ಕಚ್ಚಾ ತೈಲ ದರ ಇಳಿಕೆ ಕಂಡಿದ್ದ ಸಂದರ್ಭದಲ್ಲಿಯೂ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.

‘ಯುಪಿಎ–2’ ಸರ್ಕಾರದ ಅವಧಿಯ ಕೊನೆಗೆ, ಅಂದರೆ 2014 ಜನವರಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ 107.42 ಡಾಲರ್‌ ಇತ್ತು. 2014ರ ಮೇ ತಿಂಗಳಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗ 109.68 ಡಾಲರ್‌ಗಳಿಗೆ ಅಲ್ಪ ಏರಿಕೆ ಕಂಡಿತ್ತು. ಆ ಬಳಿಕ 2014ರ ಜೂನ್‌ನಲ್ಲಿ ಒಮ್ಮೆ ಮಾತ್ರ 111.87 ಡಾಲರ್‌ಗಳಿಗೆ ಏರಿತ್ತು. ಅಲ್ಲಿಂದೀಚೆಗೆ 2016ರವರೆಗೂ ದರದಲ್ಲಿ ಸಾಕಷ್ಟು ಇಳಿಕೆಯಾಗಿದೆ. 2016ರ ಜನವರಿಯಲ್ಲಿ ಅತ್ಯಂತ ಕನಿಷ್ಠ ಮಟ್ಟವಾದ 30.80 ಡಾಲರ್‌ಗಳಿಗೆ ಇಳಿದಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲ್‌ನ ಸರಾಸರಿ ದರವನ್ನು ಲೀಟರಿಗೆ 63 ಪೈಸೆ ಮತ್ತು ಡೀಸೆಲ್‌ಗೆ ₹ 1.06 ಇಳಿಕೆ ಮಾಡಲಾಯಿತು. ಇದರಿಂದ ಪ್ರತಿ ಲೀಟರ್‌ ಮಾರಾಟ ದರ ಕ್ರಮವಾಗಿ ₹ 59.35 ಮತ್ತು

₹ 45.03ರಷ್ಟಾಗಿತ್ತು.

9 ಬಾರಿ ಸುಂಕ ಏರಿಕೆ: ಕೇಂದ್ರ ಸರ್ಕಾರ 2014ರ ನವೆಂಬರ್‌ನಿಂದ 2016ರ ಜನವರಿವರೆಗೆ ಒಟ್ಟು 9 ಬಾರಿ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಕಳೆದ

ಅಕ್ಟೋಬರ್‌ನಲ್ಲಿ ಒಂದು ಬಾರಿ ಮಾತ್ರವೇ ಪ್ರತಿ ಲೀಟರಿಗೆ ₹ 2 ಸುಂಕ ಕಡಿತ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry